fbpx
ಸಮಾಚಾರ

ಕೊಹ್ಲಿಗಿಂತ ರೋಹಿತ್ ಉತ್ತಮ ನಾಯಕ ಎಂದ RCB ಸ್ಟಾರ್ ಆಟಗಾರ: ಆರ್‌ಸಿಬಿ ಅಭಿಮಾನಿಗಳ ಆಕ್ರೋಶ

ಕಳೆದ ಕೆಲವು ವರ್ಷಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪೈಕಿ ಉತ್ತಮ ನಾಯಕ ಯಾರು ಎಂಬ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚೆಗೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ಐದನೇ ಬಾರಿ ಟ್ರೋಫಿ ಎತ್ತಿಹಿಡಿದ ಬಳಿಕ ಈ ಚರ್ಚೆ ಅತಿರೇಕಕ್ಕೆ ಹೋಗಿದೆ.

ಟೀಂ ಇಂಡಿಯಾ ಟಿ20 ನಾಯಕತ್ವ ಪಟ್ಟವನ್ನು ವಿರಾಟ್‌ ಕೊಹ್ಲಿ ಬದಲು ರೋಹಿತ್ ಶರ್ಮಾಗೆ ನೀಡಬೇಕು ಎನ್ನುವ ಚರ್ಚೆ ಜೋರಾಗಿದೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್‌ ತಂಡದ ಆಟಗಾರನೊಬ್ಬ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಬೆಸ್ಟ್ ನಾಯಕ ಎನ್ನುವ ಮೂಲಕ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ.

ಕೊಹ್ಲಿಗಿಂತ ರೋಹಿತ್‌ ಶರ್ಮಾ ನಾಯಕತ್ವ ಸ್ವಲ್ಪ ಉತ್ತಮವಾದದ್ದು ಎಂದು ಎಡಗೈ ಬ್ಯಾಟ್ಸ್‌ಮನ್‌ ಅಭಿಪ್ರಾಯ ಹೊರಹಾಕಿದ್ದಾರೆ. ಪಂದ್ಯ ಅರ್ಥಮಾಡಿಕೊಳ್ಳುವಲ್ಲಿ ಹಾಗೂ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿರಾಟ್‌ ಕೊಹ್ಲಿಗಿಂತ ರೋಹಿತ್‌ ಶರ್ಮಾ ಉತ್ತಮ ಎಂಬ ಅಭಿಪ್ರಾಯವನ್ನು ಪಾರ್ಥಿವ್‌ ಪಟೇಲ್‌ ವ್ಯಕ್ತಪಡಿಸಿದ್ದಾರೆ.

“ಯಾರು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ, ಪಂದ್ಯವನ್ನು ಯಾರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಒತ್ತಡದಲ್ಲಿ ಸನ್ನಿವೇಶದಲ್ಲಿ ಯಾರು ಉತ್ತಮ ನಿರ್ಧಾರ ತೆಗೆದುಕೊಂಡು ತಂಡವನ್ನು ಗೆಲ್ಲಿಸಿಕೊಡುತ್ತಾರೆ ಎಂಬ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಈ ವಿಷಯದಲ್ಲಿ ಕೊಹ್ಲಿಗಿಂತ ರೋಹಿತ್‌ ಶರ್ಮಾ ಸ್ವಲ್ಪ ಉತ್ತಮರಾಗಿದ್ದಾರೆ ಎಂದು ಪಾರ್ಥಿವ್‌ ಪಟೇಲ್‌ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top