fbpx
ಸಮಾಚಾರ

ಚಿತ್ರರಂಗದ ಚೇತರಿಕೆಗೆ ಧ್ರುವ ಸರ್ಜಾ ಎಂಟ್ರಿ: ಪೊಗರು ಚಿತ್ರದ ರಿಲೀಸ್ ಡೇಟ್ ಬಹಿರಂಗ

ಚಿತ್ರರಂಗಕ್ಕೆ 2020 ಕೊಟ್ಟ ಹೊಡೆತ ಅಷ್ಟಿಷ್ಟಲ್ಲ, ಚಿತ್ರರಂಗದ ಇತಿಹಾಸದಲ್ಲೇ ಯಾವತ್ತೂ ಅನುಭವಿಸದ ಸಂಕಷ್ಟ, ಎದುರಿಸದ ಸಮಸ್ಯೆಗಳು ಈ ವರ್ಷ ಎದುರಾಯ್ತು. ಕೊರೊನಾ ಎಂಬ ಮಹಾಮಾರಿಯಿಂದ ಮೊದಲ ಬಾರಿಗೆ 6 ತಿಂಗಳಿಗೂ ಹೆಚ್ಚು ಕಾಲ ಥಿಯೇಟರ್ ಗಳು ಬಂದ್ ಆಗುವಂತಾಯ್ತು‌.

ಸದ್ಯ ಚಿತ್ರರಂಗ ಆಕ್ಟಿವ್ ಆಗಿದೆ.. ಚಿತ್ರಮಂದಿರಗಳು ಓಪನ್ ಆಗಿವೆ. ಆದರೂ ಚಿತ್ರರಂಗದಲ್ಲಿ ಕೊರೊನಾ ಬರುವ ಮುನ್ನ ಇದ್ದ ಜೋಶ್ ಕಾಣಿಸ್ತಿಲ್ಲ. ಯಾಕೆಂದರೆ ಚಿತ್ರಮಂದಿರಗಳು ಓಪನ್ ಆಗಿದ್ರೂ ಸಹ ಪೂರ್ಣ ಮಟ್ಟದಲ್ಲಿ ಟಿಕೆಟ್ ಭರ್ತಿ ಮಾಡುವ ಹಾಗಿಲ್ಲ.. ಹೀಗಾಗಿ ಬಾಕ್ಸಾಫಿಸ್ ನಲ್ಲಿ ಒಳ್ಳೆಯ ಗಳಿಕೆ ಕಾಣಲಾಗ್ತಿಲ್ಲ.

ಲಾಕ್​ಡೌನ್​ ಸಡಿಲಗೊಂಡು ಚಿತ್ರತಮಂದಿರಗಳು ಬಾಗಿಲು ತೆರೆದರೂ ಸಹ ಯಾವ ಸ್ಟಾರ್​ಗಳು ಚಿತ್ರ ರಿಲೀಸ್​ ಮಾಡುವ ಮನಸ್ಸು ಮಾಡುತ್ತಿಲ್ಲ. ಇನ್ನು ದೊಡ್ಡ ತಾರಾಬಳಗ ಇಲ್ಲದ ಸಿನಿಮಾಗಳು ತೆರೆ ಕಾಣುತ್ತಿವೆ. ಹೀಗಿರುವಾಗಲೇ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರತಂಡ ತೆರೆ ಕಾಣಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕರು ಎರಡು ದಿನಾಂಕಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ.

“ಪೊಗರು ಚಿತ್ರವನ್ನು ಡಿಸೆಂಬರ್ 25 ಅಥವಾ ಜನವರಿ 14ರಂದು ಬಿಡುಗಡೆ ಮಾಡಲು ಉದ್ದೇಶಿಸಿದ್ದೇನೆ ಎಂದು ನಂದಾ ಕಿಶೋರ್ ಹೇಳಿದ್ದಾರೆ. “ಈ ಸಾಂಕ್ರಾಮಿಕ ಪರಿಸ್ಥಿತಿ ಚಿತ್ರರಂಗವನ್ನು ಸ್ಥಗಿತಗೊಳಿಸಿದೆ. ಆದರೆ ಇದೀಗ ಮತ್ತೆ ಪ್ರಾರಂಭಿಸಲು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾರಾದರೂ ಒಬ್ಬರು ಧೈರ್ಯ ಮಾಡಿ ಒಂದು ಹೆಜ್ಜೆ ಮುಂದಿಡಬೇಕಿದೆ. ಆಗ ಮಾತ್ರ ಚಿತ್ರರಂಗ ಮತ್ತೆ ಚೇತರಿಕೆ ಪಡೆಯುತ್ತದೆ ಎಂದು ಹೇಳಿದ್ದಾರೆ.

‘ಲಾಕ್​ಡೌನ್​ನಿಂದಾಗಿ ಚಿತ್ರರಂಗ ಬಡವಾಗಿದೆ. ಆದರೆ, ಈಗ ಸಿನಿಮಾ ರಿಲೀಸ್​ ಮಾಡೋದಕ್ಕೆ ಇದು ಸರಿಯಾದ ಸಮಯ. ಯಾರಾದರೂ ಒಬ್ಬರು ಸಿನಿಮಾ ರಿಲೀಸ್​ ಮಾಡೋಕೆ ಮುಂದೆ ಬರಲೇಬೇಕು. ನಾನು ನನ್ನ ಸಿನಿಮಾದ ಬಗ್ಗೆ ವೆಲ್​ ಪ್ರಿಪೇರ್ಡ್​ ಹಾಗೂ ಕಾನ್ಫಿಡೆಂಟ್​ ಆಗಿದ್ದೀನಿ. ಸೋ ನಾನು ಡಿಸೈಡ್​ ಮಾಡಿರುವ ಎರಡು ದಿನಗಳಲ್ಲಿ ಒಂದು ದಿನ ಪೊಗರು ಸಿನಿಮಾ ರಿಲೀಸ್​ ಮಾಡ್ಬೇಕು ಅಂತ ನಿರ್ಧರಿಸಿದ್ದೇನೆ’ ಎಂದು ಹೇಳುತ್ತಾರೆ ನಿರ್ದೇಶಕ ನನದ ಕಿಶೋರ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top