fbpx
ಸಮಾಚಾರ

ಬಿಗ್‍ಬಾಸ್ ಗೆದ್ದ ದುಡ್ಡಲ್ಲಿ ಪ್ರಥಮ್ ಮಾಡಿದ್ದ ಪುಣ್ಯದ ಕೆಲಸಕ್ಕೆ ಈಗ ಸಿಗುತ್ತಿದೆ ಸೂಕ್ತ ಫಲ!

ಬಿಗ್‌ ಬಾಸ್‌ ಕನ್ನಡ ನಾಲ್ಕನೇ ಸೀಸನ್‌ನಲ್ಲಿ ಸ್ಪರ್ಧಿಸಿದ್ದ ನಟ ಪ್ರಥಮ್ ವಿನ್ನರ್‌ ಆಗಿದ್ದರು. ಆಗ ಬಹುಮಾನವಾಗಿ ಸಿಕ್ಕ ಹಣದಲ್ಲಿ ತಮ್ಮೂರಿನ ದೇವಸ್ಥಾನ ಕಟ್ಟಿಸಲು ನೆರವು ನೀಡಿದ್ದರು. ಅದೇ ದೇವಸ್ಥಾನ ಈಗ ಒಂದು ಉತ್ತಮ ಕಾರ್ಯಕ್ಕೆ ವೇದಿಕೆ ಆಗುತ್ತಿದೆ. ಆ ಬಗ್ಗೆ ಪ್ರಥಮ್‌ ಮಾಹಿತಿ ನೀಡಿದ್ದಾರೆ.

ಬಿಗ್ ಬಾಸ್ ವಿನ್ನರ್ ಪ್ರಥಮ್ ಕಟ್ಟಿಸಿದ್ದ ದೇವಸ್ಥಾನದಲ್ಲಿ ಇಬ್ಬರು ಮಹಿಳಾ ಶಿಕ್ಷಕಿಯರು ಒಂದಿಷ್ಟು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಪ್ರಥಮ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

 

 

“ಬಿಗ್ಬಾಸ್ ಗೆದ್ದ ದುಡ್ಡಲ್ಲಿ ಮಾಡಿದ ಪುಟ್ಟ ಕೆಲಸ ಎಷ್ಟು ಸಮಾಧಾನ ಕೊಡ್ತಿದೆ ಗೊತ್ತಾ?
ಕೆಲವು ಸಮಯದ ಹಿಂದೆ ನಮ್ಮೂರಿನ ಹಿರಿಯರು ದೇವಸ್ಥಾನ ಕಟ್ಟಿಸುವಾಗ ನನ್ನ ನೆನೆಸಿಕೊಂಡು ಸಹಕಾರ ಕೇಳಿದ್ರು…! ಅವತ್ತು ದೇವಸ್ಥಾನ ಕಟ್ಟೋದ್ರಲ್ಲಿ ಕೈಜೋಡಿಸಿದ್ದಕ್ಕೆ #ಸಾರ್ಥಕತೆ,#ಸಮಾಧಾನ #ಸಂತೋಷವಾಗುತ್ತಿದೆ… ಕರೋನಾದಿಂದ ಶಾಲೆಗಳು ನಡೆಯುತ್ತಿಲ್ಲ…!ಮಕ್ಕಳಿಗೆ ತೊಂದರೆಯಾಗಬಾರದು ಅಂತ ದೂರದಿಂದ ಬಂದು ದೇವಸ್ಥಾನದ ಜಾಗದಲ್ಲಿ ವಿಧ್ಯಾಭ್ಯಾಸ ಮಾಡ್ತಾ ಇದ್ದಾರೆ ಶಿಕ್ಷಕರು…!”

“ಪಾಠ ಮಾಡುವ ಮೇಷ್ಟು #ಕ್ರೈಸ್ತಸಮಾಜದವರು… ಪಾಠ ನಡೆಯೋ ಜಾಗ #ಹಿಂದುದೇವಾಲಯ….
ಕಲಿಯುತ್ತಿರುವ ಮಕ್ಕಳು #ಎಲ್ಲಾವರ್ಗದವರು…. ಇಂತಹ ಅದ್ಭುತ ಕೆಲಸಕ್ಕೆ ಸಣ್ಣದಾಗಿ ಕೈಸೇರಿಸಿದ್ದೇ ಸಮಾಧಾನ…! ಇಂತಹ ಕಾರಣಕ್ಕೆ ನನಗೆ #ಬೆಂಗಳೂರಿಗಿಂತ ಹಳ್ಳಿ ಸಮಾಧಾನ ಅನ್ನಿಸೋದು…! ಜೀವನದಲ್ಲಿ ನೀವು ಮಾಡೋ ಪುಟ್ಟಪುಟ್ಟ ಕೆಲಸಗಳು ಸಂತೃಪ್ತಿ ಕೊಡುತ್ತದೆ…! ಕಣ್ಣುಮುಚ್ಚಿ ಅದನ್ನ ಅನುಭವಿಸಿ…! ಪಕ್ಕದಲೈದ್ದವರ ನೋಡಿ ದ್ವೇಷಿಸುವುದಕ್ಕಿಂತ ಇರುವುದ್ದನ್ನ ನೋಡಿ ತೃಪ್ತರಾಗೋದು ಕಲಿಯೋಣ…! ನನ್ನ ಜೀವನದಲ್ಲಿ ಮಾಡಿರೋ ಎಷ್ಟೋ ಕೆಲಸದಲ್ಲಿ ಅತ್ಯಂತ ಹೆಚ್ಚು ಖುಷಿ, ಸಮಾಧಾನ ಕೊಟ್ಟಿದ್ದು ದೇವಸ್ಥನ ಕಟ್ಟೋದಕ್ಕೆ ಅಳಿಲುಸೇವೆ ಮಾಡಿದ್ದು…! ❤” ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top