fbpx
ಸಮಾಚಾರ

ತುಂಬು ಗರ್ಭಿಣಿಯಾದರೂ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಅನುಷ್ಕಾ ಶರ್ಮಾ

ಮೊದಲ ಮಗುವಿನ ನೀರಿಕ್ಷೆಯಲ್ಲಿರುವ ಎಂಟು ತಿಂಗಳ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಶೂಟಿಂಗ್ ಸೆಟ್ ಕಡೆ ಮುಖ ಮಾಡಿದ್ದಾರೆ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜಾಹೀರಾತು ಶೂಟ್‍ಗಾಗಿ ಮುಂಬೈನಲ್ಲಿ ಕ್ಯಾಮೆರಾ ಮುಂದೆ ಬಂದಿದ್ದಾರೆ.

 

 

ತಮ್ಮ ವ್ಯಾನಿಟಿ ವ್ಯಾನ್‌ನಿಂದ ನಟಿ ಹೊರ ಬರುತ್ತಿರುವ ಫೋಟೋ ಈಗ ವೈರಲ್ ಆಗಿದೆ. ನಟಿ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್ ಎಲ್ಲರೂ ಕೊರೋನಾ ಮಾರ್ಗ ಸೂಚಿಗಳನ್ನು ಪಾಲಿಸಿದ್ದರು.

ಟೀಲ್ ಗ್ರೀನ್ ಸಿಂಗಲ್ ಶೋಲ್ಡರ್ ಗೌನ್ ಧರಿಸಿದ್ದ ನಟಿ ಫ್ಲಾಟ್ ಚಪ್ಪಲಿ ಧರಿಸಿದ್ದರು. ಅವರೂ ಫೇಸ್‌ಮಾಸ್ಕ್‌ ಧರಿಸಿದ್ದರು. ಇತ್ತೀಚೆಗಷ್ಟೇ ನಟಿ ಸೆಟ್‌ನಿಂದ ದೂರವಿದ್ದು ಸೆಟ್‌ನ್ನು ಎಷ್ಟು ಮಿಸ್ ಮಾಡ್ಕೊಳ್ತಿದ್ರು ಎಂಬುದನ್ನು ತಿಳಿಸಿದ್ದರು.

ಅನುಷ್ಕಾ ಶರ್ಮಾ ಬರೊಬ್ಬರಿ 7 ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗರ್ಭಿಣಿಯಾಗಿರುವ ದಿನದಿಂದ ಯಾವುದೇ ಶೂಟಿಂಗ್‍ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸದ್ಯ ಜಾಹೀರಾತಿನ ಶೂಟ್‍ಗೆ ಕ್ಯಾಮೆರಾ ಮುಂದೆ ಬಂದಿರುವ ಸಂತೋಷವನ್ನು ಅನುಷ್ಕಾ ಶರ್ಮಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಅವರ ಫೋಟೋದಿಂದ ತಿಳಿಯಬಹುದಾಗಿದೆ.

ಅಂದಹಾಗೆ ಆಗಸ್ಟ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದರು. 2021ರ ಜನವರಿಯಲ್ಲಿ ಮಗು ಹುಟ್ಟುವ ನಿರೀಕ್ಷೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top