fbpx
ಸಮಾಚಾರ

ಶಮಿ ಪತ್ನಿಯ ಖಾಸಗಿ ಫೋಟೋಗಳನ್ನ ಲೀಕ್ ಮಾಡುವ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ

ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರ ಪತ್ನಿ ಹಸೀನ್‌ ಜಹಾನ್‌ ಅವರ ವೈಯಕ್ತಿಕ ಪೋಟೊಗಳನ್ನು ಸೋರಿಕೆ ಮಾಡುವ ಬೆದರಿಕೆ ಹಾಕಿದ್ದ ಕೋಲ್ಕತಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಸೀನ್ ಜಹಾನ್ ಆರಂಭದಲ್ಲಿ ಬೆದರಿಕೆ ಕರೆಗಳನ್ನು ನಿರ್ಲಕ್ಷಿಸಲು ನಿರ್ಧರಿಸಿದ್ದರು. ಪರಿಸ್ಥಿತಿ ಮೀತಿ ಮೀರಿದ ನಂತರ ಅವರು ಪೊಲೀಸ್ ಠಾಣೆಗೆ ತೆರಳಿ ನವೆಂಬರ್ 22 ರಂದು ದೂರು ನೀಡಿದ್ದರು ಎಂದು ವರದಿಯಿಂದ ತಿಳಿದುಬಂದಿದೆ.

ಶಮಿ ಪತ್ನಿ ಹಸೀನ್‌ ಜಹಾನ್‌ ಅವರ ದೂರು ನೀಡಿದ ಬಳಿಕ ಕೋಲ್ಕತಾದ ಕನ್ನಿಂಗ್‌ ಸ್ಟ್ರೀಟ್‌ ರಸ್ತೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ” ಹಸೀನ್‌ ಜಹಾನ್‌ ಅವರ ವೈಯಕ್ತಿಕ ಫೋಟೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಸೋರಿಕೆ ಮಾಡುವುದಾಗಿ ಕಳೆದ ಎರಡು ತಿಂಗಳುಗಳಿಂದ ಶಮಿ ಪತ್ನಿಗೆ ಬಂಧಿತ ಬೆದರಿಕೆ ಹಾಕುತ್ತಿದ್ದ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಈ ಹಿಂದೆ ಹಸೀನ್‌ ಜಹಾನ್‌ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ಕರೆ ಮಾಡಿ ದುಡ್ಡಿಗೆ ಆಗ್ರಹಿಸಿದ್ದಳು. ನಂತರ ಕರೆ ಮಾಡುತ್ತಿದ್ದದ್ದು ಪುರುಷನಾಗಿದ್ದು, ಆ ಮಹಿಳೆಯ ಮಗ ಎಂದು ತಿಳಿದುಬಂದಿದೆ” ಎಂದು ಪೊಲೀಸ್‌ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top