fbpx
ಸಮಾಚಾರ

ಹೊಟ್ಟೆನೋವಿನಿಂದ ಕುಸಿದೆ, ಮಗು ಕಳೆದುಕೊಳ್ಳುತ್ತಿರುವ ಅರಿವಾಯ್ತು: ಗರ್ಭಪಾತದ ದುಃಖದ ಕ್ಷಣವನ್ನು ಹಂಚಿಕೊಂಡ ಯುವ ರಾಣಿ

ಸಾಮಾನ್ಯವಾಗಿ ರಾಜಮನೆತನದವರು ತಮ್ಮ ಕುಟುಂಬದ ವಿಷಯವನ್ನು ಎಂದಿಗೂ ಬಹಿರಂಗಗೊಳಿಸುವುದಿಲ್ಲ. ಅದರಲ್ಲಿಯೂ ಬ್ರಿಟನ್‌ ರಾಜಮನೆತನದವರಿಗೆ ಯಾವುದೇ ಆಂತರಿಕ ವಿಷಯ ಹೇಳುವುದು ನಿಷಿದ್ಧ. ಆದರೆ ಇದೇ ಮೊದಲ ಬಾರಿಗೆ ತಮಗೆ ಗರ್ಭಪಾತವಾಗಿರುವ ವಿಷಯವನ್ನು ಬಹಿರಂಗಗೊಳಿಸಿದ್ದಾರೆ,.

ಹೌದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಬ್ರಿಟನ್ ರಾಜವಂಶಸ್ಥೆ ಪ್ರಿನ್ಸ್ ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್ ಗರ್ಭಪಾತದ ನೋವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಮೇಘನ್‌ ಆ ದಿನಗಳಲ್ಲಿ ತಮಗಾಗಿರುವ ಮಾನಸಿಕ ಯಾತನೆಯನ್ನು ಹಂಚಿಕೊಂಡಿದ್ದಾರೆ. ಮೇಘನ್ ತನಗಾದ ಗರ್ಭಪಾತ ವಿಚಾರವನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಪತ್ರ ಬರೆದು ಆ ಸಂದರ್ಭವನ್ನು ವಿವರಿಸಿದ್ದಾರೆ.

“ಕಳೆದ ಜುಲೈನಲ್ಲಿ ಒಂದು ದಿನ ನನಗೆ ಬೆಳಗ್ಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ನಾನು ನೋವಿನಿಂದ ಕುಸಿದು ಬಿದ್ದೆ. ನನ್ನ ಮೊದಲನೇ ಮಗುವನ್ನು ಬಿಗಿದಪ್ಪಿ ಹಿಡಿದುಕೊಂಡಿದ್ದೆ. ಆ ಘಳಿಗೆ ಎರಡನೇ ಮಗುವು ಪ್ರಪಂಚ ನೋಡುವ ಮೊದಲೇ ಕಳೆದುಕೊಳ್ಳುತ್ತಿದ್ದೇನೆ ಎನ್ನುವುದು ನನಗೆ ತಿಳಿಯಿತು.”

“ಕೆಲ ಗಂಟೆಗಳ ಬಳಿಕ ಕಣ್ಣುತೆರೆದು ನೋಡಿದಾಗ ನಾನು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದೆ. ನನ್ನ ಪತಿ ಹ್ಯಾರಿ ಹಾಗೂ ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಮಗುವನ್ನು ಕಳೆದುಕೊಂಡಿರುವ ನೋವು ಇಬ್ಬರಲ್ಲೂ ಇದೆ. ಈ ನೋವನ್ನು ಹಲವಾರು ಮಹಿಳೆಯರು ಅನುಭವಿಸಿರುತ್ತಾರೆ. ಆದರೆ ಆ ವಿಷಯದ ಕುರಿತಾಗಿ ಮಾತನಾಡುವುದು ತುಂಬಾ ಕಡಿಮೆ.”

“ಮಗುವನ್ನು ಕಳೆದುಕೊಳ್ಳುವುದು ಜಗತ್ತಿನಲ್ಲಿ ತುಂಬಾಲಾರದ ನಷ್ಟ. ಈ ನೋವಿನಲ್ಲಿದ್ದ ನನಗೆ ಆಸ್ಪತ್ರೆಯಲ್ಲಿ ನನ್ನಂತೆ ಇದೇ ನೋವಿನಿಂದ ಬಳಲುತ್ತಿದ್ದ 10-20 ಜನರು ಸಿಕ್ಕಿದರು. ಈ ನೋವು ಅವಮಾನ, ಶೋಕ ಮೌನಗಳ ಶಾಶ್ವತವಾಗಿರುವಂತೆ ಆಗಿದೆ. ಈ ಘಟನೆಯಿಂದ ಹೊರ ಬಂದು ಸಾಮಾನ್ಯ ಸ್ಥಿತಿಗೆ ಹೊಂದಿಕೊಳ್ಳುತ್ತಿದ್ದೇವೆ. ಈ ನೋವನ್ನು ಹಂಚಿಕೊಳ್ಳವ ಮೂಲಕ ಗುಣಮುಖರಾಗಲು ಒಗ್ಗಟ್ಟಿನಿಂದ ಪ್ರಯತ್ನಿಸುತ್ತಿದ್ದೇವೆ” ಎಂದು ಮೇಘನ್ ಪತ್ರದಲ್ಲಿ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top