ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹುಣಸೂರು ಕಾಂಗ್ರೆಸ್ ಶಾಸಕ ಎಚ್. ಪಿ. ಮಂಜುನಾಥ್ ಹರಿಹಾಯ್ದಿದ್ದಾರೆ. ಮಂಗಳವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಹೆಣ್ಣಾಗಿದ್ದರೆ ಸಾಕಾಗುವುದಿಲ್ಲ. ತಾಯಿ ಹೃದಯ ಇರಬೇಕು’ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈಗಾಗಲೇ ಮೈಸೂರಿಗೆ ಇಬ್ಬರು ಮಹಾರಾಣಿಯರು ಇದ್ದಾರೆ. ಈಗ ಇವರೂ ಮಹಾರಾಣಿಯಾಗಲು ಹೊರಟಿದ್ದಾರೆ. ನಮಗೆ ಮಹಾರಾಣಿ ಬೇಡ. ನಮಗೆ ಮಾತೃಹೃದಯ ಇರುವವರು ಬೇಕು’ ಎಂದು ರೋಹಿಣಿ ಸಿದೋರಿ ವಿರುದ್ಧ ಚಾಟಿ ಬೀಸಿದರು.
‘ನಾನು ಕಾಂಗ್ರೆಸ್ ಪಕ್ಷದವನು ಎಂಬ ಕಾರಣಕ್ಕೋ ಏನೋ ನನ್ನ ಪತ್ರಗಳಿಗೆ ಸ್ಪಂದಿಸುತ್ತಿಲ್ಲ. ಶಾಸಕ ಎಂಬ ಕನಿಷ್ಠ ಸೌಜನ್ಯವನ್ನೂ ಅವರು ತೋರುತ್ತಿಲ್ಲ. ಸ್ಪರ್ಧೆಗೆ ಬಿದ್ದವರಂತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ. ಕಡತಕ್ಕೆ ಸಹಿ ಹಾಕಲು ವರ್ಗಾವಣೆ ಪ್ರಕರಣ ಕೋರ್ಟ್ನಲ್ಲಿದೆ ಎಂದು ನೆಪ ಹೇಳುತ್ತಿದ್ದಾರೆ. ನಾನು ರಾಜೀನಾಮೆ ನೀಡಲು ಸಿದ್ಧ. ಬಿಜೆಪಿಯವರೇ ಶಾಸಕರಾಗಿ ಆಯ್ಕೆಯಾಗಲಿ. ಕ್ಷೇತ್ರದ ಅಭಿವೃದ್ಧಿಯಾದರೆ ಸಾಕು’ ಎಂದು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
