fbpx
ಸಮಾಚಾರ

ಆಸ್ಕರ್ 2021 ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ‘ಜಲ್ಲಿಕಟ್ಟು’ ಸಿನಿಮಾ: ರೇಸ್‌ನಲ್ಲಿ ಗೆದ್ದಿದ್ದು ಹೇಗೆ?

ಲಿಜೋ ಜೋಸ್‌ ಪೆಲ್ಲಿಸ್ಸೇರಿ ನಿರ್ದೇಶನದ ಮಲಯಾಳಂ ಚಿತ್ರ “ಜಲ್ಲಿಕಟ್ಟು” ಪ್ರತಿಷ್ಠಿತ ಆಸ್ಕರ್‌ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಪ್ರಕಟಿಸಿದೆ.

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಜಲ್ಲಿಕಟ್ಟು ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (FFI) ಇಂದು ಅಧಿಕೃತ ಮಾಹಿತಿ ನೀಡಿದ್ದು ಹಿಂದಿ, ಮರಾಠಿ ಮತ್ತು ಇತರ ಭಾಷೆಗಳ ಒಟ್ಟು 27 ಚಲನಚಿತ್ರಗಳ ಪೈಕಿ ಜಲ್ಲಿಕಟ್ಟು ಸರ್ವಾನುಮತದಿಂದ ಆಯ್ಕೆಯಾಗಿರುವುದು ಖಚಿತವಾಗಿದೆ.

‘ದಿ ಡಿಸಿಪ್ಲಿನ್‘, ‘ಶಕುಂತಲಾ ದೇವಿ’, ‘ಶಿಕಾರ’, ‘ಛಾಪಕ್’, ‘ಭೋಂಸ್ಲೆ’, ‘ಚೆಕ್ ಪೋಸ್ಟ್’ ಹೀಗೆ ಅನೇಕ ಸಿನಿಮಾಗಳ ಮಧ್ಯೆ ಜಲ್ಲಿಕಟ್ಟು ಆಯ್ಕೆಯಾಗಿದೆ. ಎಪ್ರಿಲ್ 25, 2021ರಲ್ಲಿ 93ನೇ ಅಕಾಡೆಮಿ ಅವಾರ್ಡ್ಸ್ ನಡೆಯಲಿದೆ.

ಏಪ್ರಿಲ್ 25, 2021ರಲ್ಲಿ 93ನೇ ಅಕಾಡೆಮಿ ಅವಾರ್ಡ್ಸ್ ನಡೆಯಲಿದೆ. ಕೊರೊನಾದಿಂದಾಗಿ ಈ ಕಾರ್ಯಕ್ರಮ ಸ್ವಲ್ಪ ತಡವಾಗಿದೆ. ಫೆಬ್ರವರಿ 28ರಂದು ಈ ಕಾರ್ಯಕ್ರಮ ನಡೆಯಬೇಕಾಗಿತ್ತು. 2021ರ ಫೆಬ್ರವರಿಯಲ್ಲಿ ಯಾವ ಸಿನಿಮಾಗಳು ಈ ಪ್ರಶಸ್ತಿಗಳಿಗೆ ಫೈನಲ್ ಪಟ್ಟಿಗೆ ಏರುತ್ತವೆ ಎಂಬುದು ಗೊತ್ತಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top