fbpx
ಸಮಾಚಾರ

ಕನ್ನಡಕ್ಕೆ ಬರ್ತಿದ್ದಾರೆ ಕತ್ರಿನಾ ಕೈಫ್: ‘ಪ್ಯಾಂಟಮ್’ನಲ್ಲಿ ಕಿಚ್ಚ ಸುದೀಪ್ ಜೊತೆ ಕತ್ರಿನಾ ಕೈಫ್ ಹೆಜ್ಜೆ?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದ ಬಗ್ಗೆ ದಿನೆ ದಿನೇ ಕುತೂಹಲ ಹೆಚ್ಚಾಗುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಈ ನಡುವೆ ಚಿತ್ರದಿಂದ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ.

ವಿಕ್ರಾಂತ್‌ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್‌ ಜೊತೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್‌ ಸೊಂಟ ಬಳುಕಿಸಲು ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಕೇರಳದಲ್ಲಿ ಡಿಸೆಂಬರ್‌ ಮೊದಲ ವಾರದಿಂದ 30 ದಿನಗಳ ಚಿತ್ರೀಕರಣ ಆರಂಭವಾಗಲಿದೆ. ‘ಈ ಚಿತ್ರದಲ್ಲಿ ಸೂಪರ್‌ ಆಗಿರುವ ಹಾಡೊಂದು ಇದೆ. ಆ ಹಾಡಿಗೆ ಕತ್ರಿನಾ ಕೈಫ್‌ ಅಥವಾ ನೋರಾ ಫತೇಹಿ ಅವರನ್ನು ಕರೆತರಲು ನಿರ್ಧರಿಸಿರುವ ಚಿತ್ರ ತಂಡ ಈಗಾಗಲೇ ಕತ್ರಿನಾ ಅವರ ಬಳಿ ಚರ್ಚಿಸಿದ್ದು ಡೇಟ್ಸ್‌ ಮತ್ತಿತರ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ಕತ್ರಿನಾ ಕೈಫ್‌ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಆಪ್ತರು. ಸುದೀಪ್‌ ಮತ್ತು ಸಲ್ಮಾನ್‌ ಆತ್ಮೀಯ ಸ್ನೇಹಿತರಾಗಿರುವುದರಿಂದ ಕತ್ರಿನಾ ಬಂದೇ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಾಗ್ಯೂ ಬೆಂಗಳೂರಿನಲ್ಲಿ ಹಾಕಲಾಗುವ ಅದ್ಧೂರಿ ಸೆಟ್‌ನಲ್ಲಿ ಕತ್ರಿನಾ ಹಾಡಿಗೆ ಹೆಜ್ಜೆ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top