fbpx
ಸಮಾಚಾರ

ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರನ್ನಾಗಿ ಮಾಡಿದ ಪತಿರಾಯ

ವಿವಾಹವಾದರೆ ಹೆಂಡತಿಯನ್ನು ಸಂಭಾಳಿಸುವುದು ಕಷ್ಟ ಎಂದು ವಿವಾಹಿತ ಪುರುಷರು ತಮಾಷೆಗೆ ಹೇಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಆರು ಮಹಿಳೆಯರನ್ನು ವಿವಾಹವಾಗಿದ್ದಲ್ಲದೆ ಏಕಕಾಲದಲ್ಲಿ ಅವರೆಲ್ಲರನ್ನು ಗರ್ಭಿಣಿ ಮಾಡಿದ್ದಾನೆ.! ಸದ್ಯ ಆ ಆರು ಜನ ಹೆಂಡತಿಯರು ತುಂಬು ಗರ್ಭಿಣಿಯಾಗಿದ್ದಾರೆ.

 

 

ನೈಜೀರಿಯಾದ ಪ್ಲೇಬಾಯ್ ಎಂದೇ ಪ್ರಸಿದ್ಧವಾಗಿರುವ ಪ್ರೆಟ್ಟಿ ಮೈಕ್ ಸದಾ ಸುದ್ಧಿಯಲ್ಲಿರುತ್ತಾನೆ.. ಇದೀಗ ಈತನ 6 ಪತ್ನಿಯರು ಒಟ್ಟಿಗೆ ಗರ್ಭಧರಿಸಿದ್ದಾರೆ. ಮೈಕ್ ಇತ್ತೀಚೆಗೆ ತನ್ನ 6 ಹೆಂಡತಿಯರನ್ನು ಕರೆದುಕೊಂಡು ಸ್ನೇಹಿತನೊಬ್ಬನ ಮದುವೆಗೆ ಹೋಗಿದ್ದನು. ಮದುವೆಗೆ ಹೋಗುವಾಗ ಈತನ 6 ಪತ್ನಿಯರು ಒಂದೇ ತೆರನಾದ ಬಟ್ಟೆಯನ್ನು ಹಾಕಿಕೊಂಡಿದ್ದರು. ಮತ್ತೊಂದು ವಿಶೇಷವೆಂದರೆ ಇವನ ಆರು ಪತ್ನಿಯರು ಗರ್ಭಿಣಿಯರಾಗಿದ್ದರು.

ಮದುವೆ ಮನೆಯಲ್ಲಿ ತನ್ನ 6 ಪತ್ನಿಯರನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾನೆ. ಜೊತೆಯಲ್ಲಿ ಅವರ ಹೊಟ್ಟೆಯಲ್ಲಿರುವ ಮಗುವಿಗೆ ನಾನೇ ಅಪ್ಪ ಎಂದು ಹೇಳಿಕೊಂಡಿದ್ದಾನೆ. ಮದುವೆ ಮನೆಗೆ ಬಂದಿದ್ದ ಜನರು ವಧು-ವರರನ್ನು ನೋಡುವುದು ಬಿಟ್ಟು ಮೈಕ್‍ನ ಕುಟುಂಬವನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top