fbpx
ಸಮಾಚಾರ

ನಟಿ ಉಮಾಶ್ರೀ ಕಾರು ಆಕ್ಸಿಡೆಂಟ್ ಕೇಸ್: ಚಿಕಿತ್ಸೆ ಫಲಿಸದೆ ಡಾಕ್ಟರ್ ಸಾವು

ನವಂಬರ್ 20ರಂದು ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ಉಮಾಶ್ರೀ ಮಾಲೀಕತ್ವದ ಇನ್ನೋವಾ ಮತ್ತು ಬಲೆನೋ ಕಾರಿನ ನಡುವೆ ಡಿಕ್ಕಿಯಾಗಿರುವ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನವಲಗುಂದ ತಾಲೂಕಿನ ಬೆಳಹಾರ ವೈದ್ಯೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕಳೆದ ವಾರ ಎದುರಿಗೆ ಬರುತ್ತಿದ್ದ ಕಾರಿಗೆ ಉಮಾಶ್ರೀ ಮಾಲೀಕತ್ವದ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿ, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಡಾ. ಸ್ಮಿತಾ ಕಟ್ಟಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಿಸದೇ ಇಂದು ಸಾವಿನ್ನಪ್ಪಿದ್ದಾರೆ.

ಅಪಘಾತದಲ್ಲಿ ಡಾ.ಸ್ಮಿತಾ ಕಟ್ಟಿ ಅವರ ತಾಯಿ ಶೋಭಾ ಕಟ್ಟಿ ಹಾಗೂ ಚಾಲಕ ಸಂದೀಪ ವಿಭೂತಿಮಠ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಉಮಾಶ್ರೀಯವರ ಕಾರಿನ ಚಾಲಕ ಶಿವುಕುಮಾರ್ ಬಿಡನಾಳಗೆ ಸಣ್ಣಪುಟ್ಟ ಗಾಯಗಳು ಆಗಿದ್ದವು. ಆದರೆ ಈ ಘಟನೆಯಲ್ಲಿ ಡಾ.ಸ್ಮಿತಾ ಕಟ್ಟಿ ತೀವ್ರವಾಗಿ ಗಾಯಗೊಂಡಿದ್ದರು. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಡಾ. ಸ್ಮಿತಾ ಸಾವನ್ನಪ್ಪಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top