ಹೆಬ್ಬುಲಿ, ಪೈಲ್ವಾನ್ ನಂತಹ ಹಿಟ್ ಸಿನಿಮಾಗಳ ನಿರ್ದೇಶಕ ಕೃಷ್ಣ ಅವರಿಗೆ ಪಿತೃವಿಯೋಗವಾಗಿದೆ. ಕೃಷ್ಣ ಅವರ ತಂದೆ ಡಿ.ಸುಬ್ಬಣ್ಣ ಅವರು ನೆನ್ನೆ (ನವೆಂಬರ್ 29ರಂದು) ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುಬ್ಬಣ್ಣ ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ವಿಧಿವಶರಾಗಿದ್ದು ಕುಟುಂಬ ವರ್ಗ ಅಂತ್ಯಕ್ರಿಯೆ ಮಾಡಿ ಮುಗಿಸಿದೆ.
Deeply grieved to inform the passing away of my Father 29th yesterday. My Guide,My man who trusted my dream Shri D.Subbanna.l ask all our well-wishers to keep him in their thoughts. Our family is especially grateful to all those who supported him during his illness Om shanthi 🙏 pic.twitter.com/sV1xbRn0XN
— ಕೃಷ್ಣ / Krishna (@krisshdop) November 30, 2020
ಈ ವಿಚಾರವನ್ನು ಸ್ವತಃ ನಿರ್ದೇಶಕ ಕೃಷ್ಣ ಅವರೇ ತಿಳಿಸಿದ್ದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಿನ್ನೆ 29 ನೇ ತಾರೀಖು ನನ್ನ ತಂದೆ, ನನ್ನ ಮಾರ್ಗದರ್ಶಿ ಶ್ರೀ ಡಿ.ಸುಬ್ಬಣ್ಣ ನಮ್ಮನ್ನು ಅಗಲಿದ್ದಾರೆ ಎಂದು ತಿಳಿಸಲು ತೀವ್ರವಾಗಿ ದುಃಖವಾಗುತ್ತಿದೆ. ಅವರ ಅನಾರೋಗ್ಯದ ಸಮಯದಲ್ಲಿ ಅವರನ್ನು ಬೆಂಬಲಿಸಿದ ಎಲ್ಲರಿಗೂ ನಮ್ಮ ಕುಟುಂಬ ವಿಶೇಷವಾಗಿ ಕೃತಜ್ಞವಾಗಿದೆ” ಎಂದು ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
