fbpx
ಸಮಾಚಾರ

ಬಿಎಸ್‌ವೈ ಪಿಎ ಸಂತೋಷ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌, ಕೊನೆಗೂ ಆತ್ಮಹತ್ಯೆ ಯತ್ನದ ಸತ್ಯ ರಿವೀಲ್ ಮಾಡಿದ ಸಂತೋಷ್ ಹೇಳಿದ್ದೇನು?

ಆತ್ಮಹತ್ಯೆಗೆ ಯತ್ನಿಸಿ ಬೆಂಗಳೂರಿನ ಎಂಎಸ್‌ ರಾಮಯ್ಯ ಆಸ್ಪತ್ರೆ ಸೇರಿದ್ದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ಸಂತೋಷ್‌ ತಾನು ಯಾವುದೇ ಆತ್ಮಹತ್ಯೆಗೆ ಯತ್ನಿಸಿಲ್ಲ, ಅಜಿರ್ಣ ಮಾತ್ರೆ ಬದಲಾಗಿ ನಿದ್ರೆ ಮಾತ್ರೆ ತಿಂದಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.ಊಟ ಸೇವಿಸಿದ ಬಳಿಕ ಅಜೀರ್ಣವಾಗಿತ್ತು. ಹೀಗಾಗಿ ನಾನು ತೆಗೆದುಕೊಳ್ಳಬೇಕಾದ ಮಾತ್ರೆಯನ್ನು ಬಿಟ್ಟು ನಿದ್ದೆ ಮಾತ್ರೆ ತೆಗೆದುಕೊಂಡಿದ್ದೆ. ಇದರಿಂದಾಗಿ ನನ್ನ ಆರೋಗ್ಯ ಹಾಳಾಗಿದ್ದನ್ನು ಕಂಡು ಪತ್ನಿ ಗಾಬರಿ ಬಿದ್ದು ಆಸ್ಪತ್ರೆಗೆ ಸೇರಿಸಿದ್ದಾಳೆ ಅಷ್ಟೇ. ಬೇರೆ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ನಿದ್ದೆ ಮಾತ್ರೆಯನ್ನೇ ಯಾಕೆ ತೆಗೆದುಕೊಂಡದ್ದು ಎಂಬ ಪ್ರಶ್ನೆಗೆ, ಹಿಂದಿನಿಂದಲೂ ನಿದ್ದೆ ಬಾರದೇ ಇದ್ದ ಸಂದರ್ಭದಲ್ಲಿ ನಿದ್ದೆ ಮಾತ್ರೆಯನ್ನು ಸೇವಿಸುವ ಅಭ್ಯಾಸ ನನಗಿದೆ. ಈ ವೇಳೆ ನಿದ್ದೆ ಮಾತ್ರೆಯ ಅರ್ಧ ಭಾಗವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೆ. ಇದರಲ್ಲಿ ಕಡಿಮೆ ಡೋಸ್‌ ಇರುತ್ತದೆ. ಮೊನ್ನೆ ನನ್ನ ತಪ್ಪಿನಿಂದ ಪೂರ್ಣವಾಗಿ ನಿದ್ದೆ ಮಾತ್ರೆ ಸೇವಿಸಿದ್ದೆ. ಇದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು ಎಂದು ಉತ್ತರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top