fbpx
ಸಮಾಚಾರ

12 ವರ್ಷದ ಸಮಸ್ಯೆಯನ್ನ 11 ಗಂಟೆಯಲ್ಲಿ ಬಗೆಹರಿಸಿದ ನಟ ಸೋನು ಸೂದ್

ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ ಸೋನು ಸೂದ್. ಸೋನು ಸೂದ್ ಅವರ ಕಾರ್ಯಕ್ಕೆ ಪ್ರಶಂಸೆಗಳು ಹರಿದು ಬಂದಿವೆ. ನೆಟ್ಟಿಗರು ಸೋನು ಸೂದ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

 

 

ನರ ದೌರ್ಬಲ್ಯದಿಂದ ಬಳಲುತ್ತಿದ್ದ ಅಮನ್‌ಜಿತ್!
ನಟ ಸೋನು ಸೂದ್ ಅವರ ಅಭಿಮಾನಿ ಅಮನ್‌ಜಿತ್ ಎನ್ನುವವರು ನರ ದೌರ್ಬಲ್ಯದಿಂದಾಗಿ ಮಾತನಾಡಲು ಕೂಡ ಆಗದ ಸ್ಥಿತಿಗೆ ತಲುಪಿದ್ದರು. 12 ವರ್ಷದಿಂದ ಅವರು ಈ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಸೋನು ಹಣ ಸಹಾಯ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಟ್ವೀಟ್ ಮಾಡಿರುವ ವೈದ್ಯ ಅಶ್ವನಿಕುಮಾರ್, ಅಮನ್‍ಜಿತ್ ಗುಣಮುಖರಾಗುತ್ತಿದ್ದಾರೆ. 11 ಗಂಟೆಯ ದೀರ್ಘ ಶಸ್ತ್ರ ಚಿಕಿತ್ಸೆಯಿಂದಾಗಿ ಅಮನ್‍ಜಿತ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಿಮ್ಮ ಕಾಳಜಿ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ಬರೆದು ಸೋನು ಸೂದ್ ಅವರಿಗೆ ಟ್ಯಾಗ್ ಮಾಡಿದ್ದರು. ವೈದ್ಯರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸೋನು ಸೂದ್, ಇದು ಇವತ್ತಿನ ಶುಭ ಸುದ್ದಿ. 12 ವರ್ಷದ ಸಮಸ್ಯೆ 11 ಗಂಟೆಯಲ್ಲಿ ಪರಿಹಾರವಾಗಿದೆ ಎಂದು ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top