ತೆಲುಗು ರಿಯಾಲಿಟಿ ಶೋ ಬಿಗ್ಬಾಸ್ ವೇದಿಕೆಯಲ್ಲಿ ಕನ್ನಡ ಬಿಗ್ಬಾಸ್ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಸದ್ಯ ತೆಲುಗಿನಲ್ಲಿ ನಾಲ್ಕನೇ ಆವೃತ್ತಿಯ ಬಿಗ್ಬಾಸ್ ಶೋ ನಡೆಯುತ್ತಿದ್ದು, ಅಭಿನಯ ಚಕ್ರವರ್ತಿ, ಅಕ್ಕಿನೇನಿ ನಾಗಾರ್ಜುನ್ ಅವರ ಜೊತೆ ಸ್ಟೇಜ್ ಶೇರ್ ಮಾಡಿದ್ದಾರೆ. ಈ ವಾರದ ಬಿಗ್ಬಾಸ್ ವೇದಿಕೆಯ ಅತಿಥಿಯಾಗಿ ಕಿಚ್ಚ ಸುದೀಪ್ ತೆಲುಗು ಬಿಗ್ಬಾಸ್ ವೇದಿಕೆ ಏರಿದ್ದಾರೆ.
Sunday Funday special.. We welcome @KicchaSudeep to #BiggBossTelugu4 .. Get ready for too much fun!!!
Today at 9 PM on @StarMaa pic.twitter.com/grw1KCKF9H
— starmaa (@StarMaa) November 29, 2020
15 ನಿಮಿಷಗಳ ಕಾಲ ಬಿಗ್ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿರುವ ಕಿಚ್ಚ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಸುದೀಪ್ ಅವರು ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿರುವ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳಿಂದ ಕಮೆಂಟ್ ಮತ್ತು ಟ್ವೀಟ್ಗಳ ಸುರಿಮಳೆಯೇ ಹರಿದು ಬಂದಿದೆ.
ಸ್ಪರ್ಧಿಗಳೊಂದಿಗೆ ಕನ್ನಡ ಮಾತನಾಡಿದ ಕಿಚ್ಚ
ತೆಲುಗು ಬಿಗ್ ಬಾಸ್ ವೀದಿಕೆಯಲ್ಲಿ ಕಿಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ ಎಂದು ನಾಗಾರ್ಜುನ್ ಹೇಳಿದ್ದಾಗ ಸ್ಪರ್ಧಿಯೊಬ್ಬರು ಚೆನ್ನಾಗಿದ್ದೀರಾ ಸರ್ ಎಂದು ಸುದೀಪ್ಗೆ ಕೇಳಿದ್ದಾರೆ, ಇದೆಲ್ಲ ಪ್ರೋಮೋದಲ್ಲಿ ಸಖತ್ ಹೈಲೆಟ್ ಆಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
