fbpx
ಸಮಾಚಾರ

ಇಂಡಸ್ಟ್ರಿ ಹಿಟ್ ‘ಯಜಮಾನ’ ಚಿತ್ರಕ್ಕೆ 20ನೇ ವರ್ಷದ ಸಂಭ್ರಮ

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಯಜಮಾನ’ ಸಿನಿಮಾ ರಿಲೀಸ್ ಆಗಿ ಇಂದಿಗೆ 20 ವರ್ಷಗಳು ಕಳೆದಿವೆ. 20 ವರ್ಷಗಳ ಹಿಂದೆ ಅಂದರೆ 2000ನೇ ಇಸವಿ ಡಿಸೆಂಬರ್ 1 ಕ್ಕೆ ‘ಯಜಮಾನ’ ಸಿನಿಮಾ ತೆರೆಗೆ ಬಂದಿತ್ತು.

ಆರ್ ಶೇಷಾದ್ರಿ ನಿರ್ದೇಶನ, ರೆಹಮಾನ್ ಅವರ ನಿರ್ಮಾಣದಲ್ಲಿ ಮೂಡಿ ಬಂದಿದ್ದ ‘ಯಜಮಾನ’ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಡಬಲ್ ರೋಲ್ ನಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಸಹೋದರರಾಗಿ ಶಶಿಕುಮಾರ್ ಮತ್ತು ಅಭಿಜಿತ್ ಕಾಣಿಸಿಕೊಂಡಿದ್ದರು. ಪ್ರೇಮಾ ವಿಷ್ಣುವರ್ಧನ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಸಹೋದರರ ಅನ್ಯೋನ್ಯತೆಯನ್ನು ಸಾರುವ ಕೌಟಿಂಬಿಕ ಕಥಾ ಹಂದರ ಹೊಂದಿದ್ದ ಸಿನಿಮಾ ಇದಾಗಿತ್ತು

ಯಜಮಾನ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತ್ತು, ಪ್ರೇಕ್ಷಕ ವಲಯದಲ್ಲಿ ಭಾರಿ ಮೆಚ್ಚುಗೆ ಗಳಿಸಿದ್ದ ಯಜಮಾನ ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಸತತ ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡಿತ್ತು. ಅಷ್ಟೇ ಅಲ್ಲದೆ ಚಿತ್ರ ಆಗಿನ ಕಾಲಕ್ಕೆ ನಿರ್ಮಾಣವಾಗಿದ್ದ ಎಲ್ಲಾ ದಾಖಲೆಗಳನ್ನು ಅಳಿಸಿ ಸಾರ್ವಕಾಲಿಕ ದಾಖಲೆ ಮಾಡಿತ್ತು. ಅಂದಿನ ಕಾಲಕ್ಕೆ ಕೋಟಿ ಕೋಟಿ ಬಾಚಿಕೊಂಡಿತ್ತು ಯಜಮಾನ. ಕನ್ನಡ ಚಿತ್ರರಂಗದ ಎವರ್ ಗ್ರೀನ್ ಚಿತ್ರಗಳ ಪಟ್ಟಿಯಲ್ಲಿ ‘ಯಜಮಾನ’ ಕೂಡ ಮಿಂಚೂಣಿ ಸ್ಥಾನ ಪಡೆಯುತ್ತದೆ ಎಂದರೆ ತಪ್ಪಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top