fbpx
ಸಮಾಚಾರ

ಗರ್ಭಿಣಿ ಅನುಷ್ಕಾ ಶೀರ್ಷಾಸನಕ್ಕೆ ಪತಿ ಕೊಹ್ಲಿ ಸಹಾಯ: ಫೋಟೋ ವೈರಲ್

ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಶೀರ್ಷಾಸನ ಮಾಡಲು ವಿರಾಟ್ ಕೊಹ್ಲಿ ಸಹಾಯ ಮಾಡಿದ್ದು, ಈಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಂದು ಸಾಮಾಜಿಕ ಜಾಲತಾಣದಲ್ಲಿ ಹಳೆಯ ಫೋಟೋವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಗರ್ಭವತಿಯಾದ ಸಮಯದಲ್ಲೂ ಯೋಗ ಮಾಡುವುದು ಮುಖ್ಯ ಎಂದು ಹೇಳಿದ್ದಾರೆ.

 


 

ಚಿತ್ರವನ್ನು ಪೋಸ್ಟ್ ಮಾಡಿರುವ ಅನುಷ್ಕಾ ಶರ್ಮಾ ,’ಈ ವ್ಯಾಯಾಮ (ಇದರಲ್ಲಿ ಕೈಗಳು ಕೆಳಗಿವೆ ಮತ್ತು ಕಾಲುಗಳು ಮೇಲಕ್ಕೆ ಇರುತ್ತವೆ) ಅತ್ಯಂತ ಕಷ್ಟಕರವಾಗಿತ್ತು. ಇದು ಹಳೇ ಭಾವಚಿತ್ರವಾಗಿದೆ. ಯೋಗವು ನನ್ನ ಜೀವನದ ಒಂದು ದೊಡ್ಡ ಭಾಗ, ಗರ್ಭಾವಸ್ಥೆಯಲ್ಲಿಯೂ ಕೂಡ ನಾನು ಮಾಡುತ್ತಿದ್ದ ಎಲ್ಲಾ ಆಸನಗಳನ್ನು ಮುಂದುವರೆಸಬೇಕು ಎಂದು ನನ್ನ ವೈದ್ಯರು ಸಲಹೆ ನೀಡಿದ್ದರು. ಹೆಚ್ಚು ಬಾಗುವುದು ಮತ್ತು ಬಗ್ಗುವದನ್ನು ಹೊರತುಪಡಿಸಿ ಆಸನಗಳನ್ನು ಯಾರಾದರೊಬ್ಬರ ಸಹಾಯ ಪಡೆದು ಮಾಡಬಹುದು ಎಂದು ಹೇಳಿದ್ದರು. ಕಳೆದ ಹಲವಾರು ವರ್ಷಗಳಿಂದ ನಾನು ಮಾಡುತ್ತಿರುವ ಶೀರ್ಷಾಸನಕಾಗಿ ನಾನು ಗೋಡೆ ಮತ್ತು ನನ್ನ ಸಮರ್ಥ ಪತಿ ವಿರಾಟ್ ಕೊಹ್ಲಿ ಅವರ ಬೆಂಬಲದೊಂದಿಗೆ ಸಮತೋಲನವನ್ನು ಮಾಡಿದ್ದೇನೆ, ಇದು ನನಗೆ ಹೆಚ್ಚುವರಿ ಸುರಕ್ಷತೆ ಒದಗಿಸಿದೆ’ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top