fbpx
ಸಮಾಚಾರ

ನವ್​ದೀಪ್ ಸೈನಿ ಬಳಿ ಕ್ಷಮೆ ಕೇಳಿದ ಆಸೀಸ್ ದಂತಕತೆ ಗಿಲ್ ಕ್ರಿಸ್ಟ್​: ಯಾಕೆ ಗೊತ್ತಾ?

ಪ್ರಥಮ ಏಕದಿನ ಪಂದ್ಯದ ವೀಕ್ಷಕ ವಿವರಣೆ ವೇಳೆ ದೊಡ್ಡದೊಂದು ಎಡವಟ್ಟು ಮಾಡಿದ ಆಸ್ಟ್ರೇಲಿಯಾದ ಮಾಜಿ ಆಟಗಾರ. ಕಮೆಂಟೇಟರ್ ಆ್ಯಡಂ ಗಿಲ್‌ಕ್ರಿಸ್ಟ್‌ ಬಳಿಕ ಇದಕ್ಕಾಗಿ ಕ್ಷಮೆ ಯಾಚಿಸಿದ ಘಟನೆ ಸಂಭವಿಸಿದೆ.

ಭಾರತದ ವೇಗಿ ನವದೀಪ್ ಸೈನಿ ಬೌಲಿಂಗ್ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಶೇನ್ ವಾರ್ನ್ ಮತ್ತು ಆ್ಯಡಮ್ ಗಿಲ್‌ಕ್ರಿಸ್ಟ್ ಸೈನಿ ಬಗ್ಗೆ ಮಾತನಾಡಿದರು. ಕಾಮೆಂಟರಿ ನಡುವೆ ಗಿಲ್ ಕ್ರಿಸ್ಟ್ ಅವರು ನವದೀಪ್ ಸೈನಿ ಇತ್ತೀಚೆಗೆ ತಂದೆಯನ್ನು ಕಳೆದುಕೊಂಡರೂ ತಂಡಕ್ಕಾಗಿ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಿಬಿಟ್ಟರು.

ಆದರೆ, ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿದ್ದು ನವ್​ದೀಪ್ ಸೈನಿ ಅಲ್ಲ, ಮೊಹಮ್ಮದ್ ಸಿರಾಜ್. ಸಿರಾಜ್ ಹೆಸರು ಹೇಳುವ ಬದಲು ತಪ್ಪಾಗಿ ನವದೀಪ್ ಸೈನಿ ಹೇಳಿದ್ದರು ಗಿಲ್​ ಕ್ರಿಸ್ಟ್. ಈ ವಿಚಾರ ಮನವರಿಕೆ ಆಗುತ್ತಿದ್ದಂತೆ ಗಿಲ್ ಕ್ರಿಸ್ಟ್ ಸೈನಿ ಬಳಿ ಕ್ಷಮೆ ಯಾಚಿಸಿದ್ದಾರೆ.

 

 

ಗಿಲ್ ಕ್ರಿಸ್ಟ್ ಅವರ ತಪ್ಪಾದ ಉಲ್ಲೇಖನದ ವಿಚಾರವಾಗಿ ನ್ಯೂಜಿಲೆಂಡ್ ಕ್ರಿಕೆಟಿಗ ಮಿಚೆಲ್ ಮೆಕ್ಲೆನಾಘನ್ ಮತ್ತು ಕೆಲವು ಅಭಿಮಾನಿಗಳು ಪ್ರಸ್ತಾಪಿಸಿದರು. ಆಗ ತಮ್ಮ ತಪ್ಪಿಗೆ ಅವರು ಇಬ್ಬರು ಭಾರತೀಯ ಆಟಗಾರರಿಗೆ ಕ್ಷಮೆ ಯಾಚಿಸಿದರು.

‘ಹೌದು, ಧನ್ಯವಾದಗಳು, ನನ್ನ ಪ್ರಸ್ತಾಪದಲ್ಲಿ ನಾನು ತಪ್ಪಾಗಿ ಗ್ರಹಿಸಿದ್ದೇನೆ. ನನ್ನ ದೋಷಕ್ಕೆ ನವದೀಪ್ ಸಿನಿ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರಿಗೂ ಕ್ಷಮೆಯಾಚಿಸುತ್ತೇವೆ ಎಂದು ಅಭಿಮಾನಿಗಳ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಗಿಲ್‌ಕ್ರಿಸ್ಟ್ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top