fbpx
ಸಮಾಚಾರ

ಕರ್ನಾಟಕ ಸೇರಿ 6 ರಾಜ್ಯಗಳಲ್ಲಿನ ಬಡ ಮಕ್ಕಳ ಚಿಕಿತ್ಸೆಗೆ ‘ಕ್ರಿಕೆಟ್ ದೇವರ’ ಆರ್ಥಿಕ ಸಹಾಯ!

ಆರು ರಾಜ್ಯಗಳಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡ 100 ಮಕ್ಕಳ ಚಿಕಿತ್ಸೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ಅವರಿಗೆ ಸಂಬಂಧಿಸಿರುವ ಚಾರಿಟಿ ಫೌಂಡೇಶನ್ ತಿಳಿಸಿದೆ.

ಸಚಿನ್ ತೆಂಡೂಲ್ಕರ್ ಫೌಂಡೇಶನ್ ಮತ್ತು ಏಕಮ್ ಫೌಂಡೇಶನ್ ಜೊತೆಯಾಗಿ ಸರ್ಕಾರಿ ಮತ್ತು ಟ್ರಸ್ಟ್ ಆಸ್ಪತ್ರೆಗಳಲ್ಲಿ ಗಂಭೀರ ಕಾಯಲೆಗಳಿಂದ ಬಲಳುತ್ತಿರುವ ಹಾಗೂ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ಭರಿಸಲಾಗದೇ ಪರದಾಡುತ್ತಿರುವ ಕಡುಬಡಕುಟುಂಬದ ಮಕ್ಕಳಿಗೆ ನೆರವಾಗಲಿದೆ. ಸಚಿನ್ ಅವರು ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಬಡ ಕುಟುಂಬದ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡಲಿದ್ದಾರೆ.

ಸಚಿನ್‌ ಅವರ ಈ ಕಾರ್ಯದಿಂದ ಪ್ರತಿ ವರ್ಷ ಸುಮಾರು 2,000ಕ್ಕೂ ಹೆಚ್ಚು ಬಡ ಮಕ್ಕಳಿಗೆ ನೆರವಾಗಲಿದೆ. ಇದಲ್ಲದೇ ಸಚಿನ್‌, ವಿಶ್ವ ಮಕ್ಕಳ ದಿನಾಚರಣೆಯಂದು ಯುನಿಸೆಫ್‌ ನಡೆಸುವ ಮಕ್ಕಳ ಕಾರ‍್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಈ ಕಾರ‍್ಯಕ್ರಮ ನೆರವಾಗಲಿದೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಸಚಿನ್‌, ಅಸ್ಸಾಂನ ಕರೀಮ್‌ಗಂಜ್‌ ಜಿಲ್ಲೆಯಲ್ಲಿರುವ ಮುಕುಂದ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆ ನೀಡಿದ್ದರು.

“ಶ್ರೀ ಸಚಿನ್ ತೆಂಡೂಲ್ಕರ್, ಫೌಂಡೇಶನ್ ಒಡನಾಟ ಬಹಳ ಫಲಪ್ರದವಾಗಿದೆ ಮತ್ತು ಸಚಿನ್ ಆರೋಗ್ಯ ವಿಷಯದಲ್ಲಿ ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಂಘವು ಕೆಲಸ ಮಾಡಿದೆ ಎಂದು ಎಕಾಮ್ ಫೌಂಡೇಶನ್‌ನ ವ್ಯವಸ್ಥಾಪಕ ಪಾಲುದಾರ ಅಮೀತಾ ಚಟರ್ಜಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top