fbpx
ಸಮಾಚಾರ

ಡಿಸೆಂಬರ್ 03: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

December 3, 2020 Kannada Panchangam
ಡಿಸೆಂಬರ್ 3, 2020 ಗುರುವಾರ
ವರ್ಷ : 1942 ಶಾರ್ವರಿ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ 7:26 pm
ನಕ್ಷತ್ರ : ಆರುಧ್ರ 12:21 pm
ಯೋಗ : ಶುಭ 11:02 am
ಕರಣ : ವಾಣಿಜ 6:57 am ವಿಷ್ಟಿ 7:26 pm

Time to be Avoided
ರಾಹುಕಾಲ : 1:34 pm – 2:58 pm
ಯಮಗಂಡ : 6:31 am – 7:55 am
ದುರ್ಮುಹುರ್ತ : 10:16 am – 11:01 am, 2:47 pm – 3:32 pm
ವಿಷ : 1:00 am – 2:41 am
ಗುಳಿಕ : 9:20 am – 10:44 am

Good Time to be Used
ಅಮೃತಕಾಲ : Nil
ಅಭಿಜಿತ್ : 11:47 am – 12:32 pm

Other Data
ಸೂರ್ಯೋದಯ : 6:27 am
ಸುರ್ಯಾಸ್ತಮಯ : 5:51 pm
ರವಿರಾಶಿ : ವೃಶ್ಚಿಕ
ಚಂದ್ರರಾಶಿ : ಮಿಥುನ

 

 

 

 

 

ನೆಮ್ಮದಿಯ ವಾತಾವರಣ. ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿರಿ. ಮನೆಗೆ ಧನಲಕ್ಷ್ಮೀಯ ಆಗಮನವಾಗುವ ಸಾಧ್ಯತೆ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

ದೂರದ ಬಂಧುಗಳಿಂದ ಅನಗತ್ಯ ಆರೋಪಗಳು ಕೇಳಿ ಬರುವ ಸಂದರ್ಭವಿದ್ದು ಈದಿನ ನಿಮ್ಮ ಅತಿ ಉತ್ಸಾಹಕ್ಕೆ ಭಂಗ ಬರುವ ಸಾಧ್ಯತೆ. ಆದಷ್ಟು ಈದಿನ ಮೌನವ್ರತ ಧರಿಸುವುದು ಒಳ್ಳೆಯದು.

 

ನಿಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೈಗೊಳ್ಳುವುದನ್ನು ಬಿಟ್ಟಲ್ಲಿ ಒಳಿತಾಗುವುದು. ಇಲ್ಲದೆ ಇದ್ದಲ್ಲಿ ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಹೆಚ್ಚಾಗಿ ನಿಮ್ಮ ಸ್ನೇಹ ಸೇತುವೆಗೆ ಭಂಗ ಉಂಟಾಗುವುದು. ಆರ್ಥಿಕ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ.

 

ಬದುಕು ಯಾಂತ್ರಿಕವಾಗುವುದರಿಂದ ಮನಸ್ಸಿಗೆ ಬೇಸರ ಮೂಡುವುದು. ನೀವು ನಿಮ್ಮ ಮನಸ್ಸನ್ನು ಸುಸ್ಥಿತಿಗೆ ತರಲು ಪ್ರವಾಸ ಮಾಡುವುದು ಒಳ್ಳೆಯದು. ಇಲ್ಲವೇ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ವಿಚಾರ ವಿನಿಮಯ ಮಾಡಿಕೊಳ್ಳಿರಿ.

 

 

ದೂರದ ಬಂಧುಗಳ ಆಗಮನದಿಂದ ಮನಸ್ಸಿಗೆ ಹರ್ಷವುಂಟಾಗುವುದು. ಮನೆಯ ಮಂದಿಯ ಸಂಗಡ ಉತ್ತಮ ಬಾಂಧವ್ಯ ಏರ್ಪಡುವುದು. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನಿಮ್ಮ ಮನೋಕಾಮನೆಗಳು ಈಡೇರುವುದು.

 

 

ನಿಮ್ಮ ಮಾತಿನ ವರಸೆಯಿಂದ ಬಹು ದಿನದ ಮಿತ್ರರೇ ಅಕಾರಣ ನಿಮ್ಮನ್ನು ವಿರೋಧಿಸುವರು. ಮನೆಯಲ್ಲೂ ಅಶಾಂತಿಯ ವಾತಾವರಣ ಉಂಟಾಗುವುದು. ಮನೋನಿಯಾಮಕ ರುದ್ರ ದೇವರನ್ನು ಭಜಿಸಿರಿ. ಮನಸ್ಸಿಗೆ ಶಾಂತಿ ದೊರೆಯುವುದು.

 

 

ದೇಹಾರೋಗ್ಯ ಉತ್ತಮವಾಗಿರುವುದು. ಭೋಜನ ಸುಖ, ಮಿತ್ರರೊಡನೆ ಸೌಹಾರ್ದಯುತ ವಾತಾವರಣ. ಸಂಗಾತಿಯೊಂದಿಗೆ ಉತ್ತಮ ಮಧುರ ಕ್ಷ ಣಗಳನ್ನು ಕಳೆಯುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.

 

 

ಪ್ರೀತಿ ಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕಡಿಮೆ ಆಗುವುದು. ಆರ್ಥಿಕ ಪರಿಸ್ಥಿತಿಯಲ್ಲಿ ನಿರೀಕ್ಷೆ ಮೀರಿ ಉತ್ತಮ ಫಲಿತಾಂಶವನ್ನು ಹೊಂದುವಿರಿ. ಹಳೆಯ ಸ್ನೇಹಿತರ ಆಗಮನದಿಂದ ಗತಿಸಿಹೋದ ಮಧುರ ಕ್ಷ ಣಗಳನ್ನು ಮೆಲುಕು ಹಾಕುವಿರಿ.

 

ನಿಮ್ಮ ಕಾರ್ಯಯೋಜನೆಗಳು ಪೂರ್ಣಗೊಳ್ಳುವವು. ನೀವು ಅಂದುಕೊಂಡಿದ್ದನ್ನು ಸಾಧಿಸುವಿರಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ನಿಮ್ಮ ಗೌರವ ಸಂಭಾವನೆ ಹೆಚ್ಚಾಗುವ ಸಾಧ್ಯತೆ ಇರುವುದು.

 

 

ಕೆಲವೊಮ್ಮೆ ಅತಿಯಾದ ಜಾಣತನ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಹಾಗಾಗಿ ಅನ್ಯರ ವಿಚಾರಧಾರೆಗಳನ್ನು ಲಕ್ಷ ್ಯಕೊಟ್ಟು ಆಲಿಸಿರಿ. ಇದರಿಂದ ಪತ್ನಿ ಪುತ್ರರಲ್ಲಿನ ಅನಗತ್ಯ ಸಂಶಯಗಳು ನಿವಾರಣೆ ಆಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ದುಂದು ವೆಚ್ಚ ಕಡಿಮೆ ಮಾಡುವುದು ಸೂಕ್ತ. ಹಣದ ವ್ಯವಹಾರ ಗುಪ್ತವಾಗಿರಲಿ. ಅದರಿಂದ ನೀವು ಅಂದುಕೊಂಡ ಎಲ್ಲ ಕಾರ್ಯಗಳಲ್ಲೂ ಜಯಶೀಲರಾಗುವಿರಿ. ಮನೆಯಲ್ಲಿನ ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯ ಉತ್ತಮವಾಗಿರುವುದು.

 

ನಿಮ್ಮ ಅದೃಷ್ಟವನ್ನು ಮುಂದೆ ತಳ್ಳಲು ಇಂದು ಸೂಕ್ತ ದಿನವಲ್ಲ. ತಾಳ್ಮೆಯಿಂದ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿರಿ. ಯಶಸ್ಸು ಎಂಬುದು ನೆರಳಿನಂತೆ ನಿಮ್ಮನ್ನು ಹಿಂಬಾಲಿಸಿಕೊಂಡು ಬರುವುದು. ಆರ್ಥಿಕ ಸದೃಢತೆ ಇರುವುದು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top