fbpx
ಸಮಾಚಾರ

“ಹೆಂಡತಿ ಜೊತೆ ರಸಂ ಮಾಡ್ಕೊಂಡ್ ಕೂತಿದ್ಯ” ಎಂದು ಕಾಲೆಳೆದ ನೆಟ್ಟಿಗನಿಗೆ ಚಂದನ್ ಶೆಟ್ಟಿ ಖಡಕ್ ಉತ್ತರ

ಬಿಗ್ ಬಾಸ್ ಜೋಡಿ ಎಂದೇ ಕರೆಯಲ್ಪಡುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ.. ಆದರೆ ಇದೀಗ ಮತ್ತೊಮ್ಮೆ ಟ್ರೋಲ್ ಆಗಿದ್ದು ಚಂದನ್ ಶೆಟ್ಟಿ ನೇರವಾಗಿ ಹೆಂಡತಿ‌ ಬಗ್ಗೆ ಮಾತನಾಡಿದ್ದಕ್ಕೆ ನೆಟ್ಟಿಗನಿಗೆ ಖಡಕ್ ಉತ್ತರ ನೀಡಿದ್ದಾರೆ.

 

 

ನಟ ಚಂದನ್ ಶೆಟ್ಟಿ ಹಾಗೂ ಪತ್ನಿ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ರಸಂ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ನೆಟ್ಟಿಗನೊಬ್ಬ ಚಂದನ್ ಶೆಟ್ಟಿ ಕಾಲೆಳೆದಿದ್ದ. ‘ಕನ್ನಡವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ, ಹೆಂಡತಿ ಜೊತೆ ರಸಂ ಮಾಡ್ತಿದ್ದೀಯಲ್ಲ ಗುರು’ ಎಂದು ವ್ಯಕ್ತಿಯೊಬ್ಬ ಚಂದನ್ ಶೆಟ್ಟಿಯ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದ.

 

 

ಇದಕ್ಕೆ ಆನ್ಸರ್ ಮಾಡಿದ ಚಂದನ್ ಶೆಟ್ಟಿ ಕಾಲೆಳೆದ ನೆಟ್ಟಿಗನ ಚಳಿ ಬಿಡಿಸಿದ್ದಾರೆ., ” ಗುರು, ನಾನ್ ರಸಂ ಆದ್ರೂ ಮಾಡ್ತೀನಿ, ಕೋಳಿ ಸಾರ್ ಆದ್ರೂ ಮಾಡ್ತೀನಿ. ನಿಮ್ ಮನೆ ಸ್ಟೌ ಮೇಲೆ ಮಾಡ್ತಿಲ್ವಲ್ಲಾ.. ಚಿಲ್.. ನನ್ನ ಈ ಈ ಹಿಂದಿನ ಕೆಲವು ಹಾಡುಗಳು ಈಗಾಗಲೇ ಫಾರಿನ್ ಪಬ್‌ಗಳಲ್ಲಿ ಪ್ಲೇ ಆಗ್ತಿದೆ. ಕನ್ನಡ ಬೆಂಬಲಿಸೋರಿಂದ ಕನ್ನಡ ಅಂತಾರಾಷ್ಟ್ರೀಯ ಮಟ್ಟ ತಲುಪಬಹುದು. ಆದರೆ ನಿಮ್ಮಂತವರು ದ್ವೇಷ ಮಾಡ್ತಾ, ಕಲಾವಿದರನ್ನು ಡಿಮೋಟಿವೇಟ್ ಮಾಡ್ತೀರಿ.. ನಿಮ್ಮಂತವರಿರಬೇಕು. ಅದೇ ನಮಗೆ ಮೋಟಿವೇಷನ್. ನಾನು ಗುರಿ ತಲುಪೋ ತನಕ ಹೇಟ್ ಮಾಡ್ತಿರಿ” ಎಂದು ಚಂದನ್ ಖಡಕ್ ಆಗಿ ಉತ್ತರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top