fbpx
ಸಮಾಚಾರ

‘ಕನ್ನಡಕ್ಕೆ ಚಟ್ಟ ತಯಾರು’: ‘ಸಲಾರ್’ ಚಿತ್ರ ಘೋಷಣೆ ಬೆನ್ನಲ್ಲೇ ಜಗ್ಗೇಶ್ ಹೀಗೆ ಹೇಳಿದ್ದೇಕೆ?

ಕೆಲವೇ ದಿನಗಳ ಹಿಂದೆ ಪ್ಯಾನ್‌ ಇಂಡಿಯಾ ಸಿನಿಮಾ ಕಾನ್ಸೆಪ್ಟ್‌ಗೆ ಸಂಬಂಧಿಸಿದಂತೆ ನಟ ಜಗ್ಗೇಶ್‌ ಆಡಿದ ಕೆಲವು ಮಾತುಗಳು ಭಾರಿ ಚರ್ಚೆಗೆ ಕಾರಣ ಆಗಿದ್ದವು. ಈಗ ಮತ್ತೆ ಅದೇ ವಿಷಯ ಮುನ್ನೆಲೆಗೆ ಬಂದಿದೆ. ಅತ್ತ, ‘ಹೊಂಬಾಳೆ ಫಿಲ್ಮ್ಸ್‌’ ಬ್ಯಾನರ್‌ ಮೂಲಕ ‘ಪ್ರಶಾಂತ್ ನೀಲ್’ ನಿರ್ದೇಶನದ ಹೊಸ ಪ್ಯಾನ್‌ ಇಂಡಿಯಾ ಸಿನಿಮಾ ಘೋಷಣೆ ಆಗುತ್ತಿದ್ದಂತೆಯೇ ಇತ್ತ ಜಗ್ಗೇಶ್‌ ಖಡಕ್‌ ಟ್ವೀಟ್‌ ಮಾಡಿದ್ದಾರೆ.

ಹೊಂಬಾಳೆ ಫಿಲಂಸ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾ ಸಲಾರ್​ಗೆ ಟಾಲಿವುಡ್​ ನಟ ಪ್ರಭಾಸ್​ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗ ಇದೇ ಕೆಲವು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಈ ಸಿನಿಮಾ ಮಾಡಲು ಯೋಗ್ಯ ನಟರೇ ಇಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಜಗ್ಗೇಶ್ ಅವರು ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಹೇಳಿದ್ದ ಮಾತು ಈಗ ನಿಜವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

 

 

‘ಪ್ಯಾನ್‌ ಇಂಡಿಯಾ ಬಗ್ಗೆ ಜಗ್ಗೇಶ್‌ ಹೇಳಿದ ಮಾತು ಈಗ ನಿಜ ಎನಿಸುತ್ತಿದೆ’ ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ. ಅದಕ್ಕೆ ಜಗ್ಗೇಶ್‌ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ರಾಯರನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ! ಅರಿವಾಗದ ಬಹುತೇಕರು ನೆಗೆಟಿವ್‌ ತೆಗೆದುಕೊಂಡು, ಉತ್ತಮ ಮಾಹಿತಿ ಅಣಕ ಚರ್ಚೆಗೆ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರು. ಮುಂದೈತೆ ಕನ್ನಡಿಗರೆ ಊರಬ್ಬ. ಆಗ ಅಯ್ಯೋ ಜಗ್ಗೇಶ ಅಂದೇ ಹೇಳಿದ, ನಾವು ಅಣಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ! ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು!’ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top