fbpx
ಸಮಾಚಾರ

ಪ್ಯಾನ್ ಇಂಡಿಯಾ ಸಿನಿಮಾ ವಿವಾದ: ಯಶ್ ಬಗ್ಗೆ ಮೌನ ಮುರಿದ ನಟ ಜಗ್ಗೇಶ್!

ಕೆಲವೇ ದಿನಗಳ ಹಿಂದೆ ಪ್ಯಾನ್‌ ಇಂಡಿಯಾ ಸಿನಿಮಾ ಕಾನ್ಸೆಪ್ಟ್‌ಗೆ ಸಂಬಂಧಿಸಿದಂತೆ ನಟ ಜಗ್ಗೇಶ್‌ ಆಡಿದ ಕೆಲವು ಮಾತುಗಳು ಭಾರಿ ಚರ್ಚೆಗೆ ಕಾರಣ ಆಗಿದ್ದವು. ಪ್ಯಾನ್​ ಇಂಡಿಯಾ ಸಿನಿಮಾದಿಂದ ಕನ್ನಡದ ಕಲಾವಿದರಿಗೆ ಕೆಲಸ ಸಿಗುವುದಿಲ್ಲ. ಯಾರನ್ನೋ ಮೆಚ್ಚಿಸಲು ಪ್ಯಾನ್​ ಇಂಡಿಯಾ ಸಿನಿಮಾ ಮಾಡುವಂತಿದೆ ಎಂದಿದ್ದರು.

ಜಗ್ಗೇಶ್ ಅವರ ಹೇಳಿಕೆ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ನವರಸ ನಾಯಕನ ವಿರುದ್ಧ ತಿರುಗಿಬಿದ್ದಿದ್ದರು. ಜಗ್ಗೇಶ್ ಅವರು ಯಶ್ ಅವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಟೀಕಿಸಿದ್ದರು. ಆದ್ರೆ, ಜಗ್ಗೇಶ್ ಅಂದು ಪ್ರೆಸ್‌ಮೀಟ್‌ನಲ್ಲಿ ಯಾರ ಹೆಸರು ಉಲ್ಲೇಖಿಸಿರಲಿಲ್ಲ. ಇದೀಗ, ಯಶ್ ಅವರ ಹಳೆ ಸಂದರ್ಶನದ ತುಣುಕು ಒಂದನ್ನು ಹಂಚಿಕೊಂಡಿರುವ ಜಗ್ಗೇಶ್, ಯಶ್ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

 

ಯಶ್ ಬಗ್ಗೆ ಜಗ್ಗೇಶ್ ಟ್ವೀಟ್!
ಅಭಿಮಾನಿಯೊಬ್ಬರು ಯಶ್​ ಸಂದರ್ಶನವೊಂದರಲ್ಲಿ ಜಗ್ಗೇಶ್​ ಅವರ ಬಗ್ಗೆ ಹೇಳಿರುವ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದು, ಅದಕ್ಕೆ ಜಗ್ಗೇಶ್​ರನ್ನು ಟ್ಯಾಗ್​ ಮಾಡಿದ್ದಾರೆ. ಅದನ್ನು ನೋಡಿದ ನವರಸ ನಾಯಕ ಯಶ್​ ಬಗ್ಗೆ ಒಂದೆರಡು ಸಾಲುಗಳನ್ನು ಬರೆದಿದ್ದಾರೆ.

‘ನನ್ನ ಹಿರಿಮಗನ ವಯಸ್ಸಿನವ..! ನನ್ನಂತೆ ಯಾರ ಸಹಾಯವಿಲ್ಲದೆ ಬೆಳೆದವ ಎಂಬ ಹೆಮ್ಮೆಯಿದೆ. ಉದ್ಯಮದ ಒಳಗೆ ನಮ್ಮ ವಿಶ್ವಾಸ ಹಿರಿಯರು ಕಿರಿಯರ ಜೊತೆ ಸೌಹಾರ್ದಯುವಾಗಿದೆ! ಸಾಮಾಜಿಕ ಜಾಲತಾಣದಲ್ಲೆ ಲೈಕ್ಸ್‌ಗಾಗಿ ಜೀವಿಸಿ ಮೊಬೈಲ್‌ನಲ್ಲೆ ಬದುಕುವ ಹಾಗು ಇತ್ತೀಚಿಗೆ ಯೂಟ್ಯೂಬ್‌ಗಾಗಿ ಖಾತೆ ತೆರೆದು ಹಿಂಬಾಲಕರಿಗಾಗಿ ಅಲೆಯುವ ತಂತ್ರವಾದಿಗಳಿಗೆ ಅರಿವಾಗದು’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top