fbpx
ಸಮಾಚಾರ

ಕೆಜಿಎಫ್ ಚಾಪ್ಟರ್-2 ಟೀಸರ್ ಬಿಡುಗಡೆ ಪ್ರಶ್ನೆಗೆ ಸಿಕ್ತು ಉತ್ತ: ಬೇರೆ ರೇಂಜ್‌ನಲ್ಲೇ ಇರುತ್ತೆ ಟೀಸರ್

ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಚಿತ್ರ ಕೆಜಿಎಫ್-2 ಚಿತ್ರೀಕರಣ ಅಂತಿಮ ಹಂತ ತಲುಪುತ್ತಿರುವ ಬೆನ್ನಲ್ಲೇ ಇದೀಗ ಬಿಗ್ ಅನೌನ್ಸ್ ಮೆಂಟ್ ಹೊರ ಬಿದ್ದಂತಾಗಿದ್ದು, ರಾಖಿ ಭಾಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗುವ ಕುರಿತು ಸುಳಿವು ಸಿಕ್ಕಿದೆ.

ಕೆಲವು ಪೋಸ್ಟರ್‌ಗಳನ್ನು ಹೊರತುಪಡಿಸಿದರೆ ‘ಕೆಜಿಎಫ್‌: ಚಾಪ್ಟರ್‌ 2’ ಬಳಗದಿಂದ ಯಾವುದೇ ಕಂಟೆಂಟ್‌ ಅಭಿಮಾನಿಗಳಿಗೆ ಸಿಕ್ಕಿಲ್ಲ. ಕೊನೇ ಪಕ್ಷ ಟೀಸರ್‌ ಆದರೂ ನೋಡೋಣ ಎಂಬ ಬಯಕೆಯಲ್ಲಿ ಕಾದಿದ್ದಾರೆ ಸಿನಿಪ್ರಿಯರು. ಹಾಗಾದರೆ, ಟೀಸರ್‌ ಬಿಡುಗಡೆ ಯಾವಾಗ? 2021ರ ಜ.8ರಂದು ಈ ಚಿತ್ರದ ಟೀಸರ್‌ ರಿಲೀಸ್‌ ಆಗಲಿದೆ ಎಂಬುದಕ್ಕೆ ಸ್ವತಃ ನಿರ್ಮಾಪಕ ಕಾರ್ತಿಕ್‌ ಗೌಡ ಸೂಚನೆ ನೀಡಿದ್ದಾರೆ.

 

 

ಕೆಜಿಎಫ್​ 2 ಟೀಸರ್ ರಿಲೀಸ್​ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ. ಆದರೆ ಯಶ್​ ಅಭಿಮಾನಿಯೊಬ್ಬರಿಗೆ ಟ್ವೀಟ್​ ಮೂಲಕ ಉತ್ತರ ಕೊಟ್ಟಿರುವ ಹೊಂಬಾಳೆ ಫಿಲಂಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ, ಹುಟ್ಟುಹಬ್ಬಕ್ಕೆ ನೋಡ್ತಿಯಾ ಬೇರೆ ರೇಂಜ್​ನಲ್ಲೇ ಇರುತ್ತೆ ಎಂದು ಉತ್ತರಿಸಿದ್ದಾರೆ. ಈ ಪೋಸ್ಟ್​ ಅನ್ನೇ ರೀಟ್ವೀಟ್​ ಮಾಡುತ್ತಿರುವ ಯಶ್​ ಅಭಿಮಾನಿಗಳು, ಜನವರಿ 8ಕ್ಕೆ ಟೀಸರ್​ ರಿಲೀಸ್​ ಆಗಲಿದೆ ಎಂದು ಖುಷಿಯಿಂದ ಪೋಸ್ಟ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top