fbpx
ಸಮಾಚಾರ

‘ACT 1978’ ಯಶಸ್ಸಿನ ಬಳಿಕ ರಾಣಿ ಅಬ್ಬಕ್ಕನ ಸಿನಿಮಾ ಘೋಷಿಸಿದ ನಿರ್ದೇಶಕ ಮಂಸೋರೆ!

Act-1978 ಸಿನಿಮಾ ನಿರ್ದೇಶಿಸಿ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ನಿರ್ದೇಶಕ ಮಂಸೋರೆ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ. Act-1978 ಮೂಲಕ ಪ್ರಸ್ತುತ ಸಮಾಜದ ಕತೆ ಹೇಳಿದ್ದ ಮಂಸೋರೆ ತಮ್ಮ ಮುಂದಿನ ಸಿನಿಮಾದಲ್ಲಿ ಇತಿಹಾಸದ ವಿಷಯಕ್ಕೆ ಕೈ ಹಾಕಿದ್ದಾರೆ. ವೀರ ರಾಣಿ ಅಬ್ಬಕ್ಕನ ಕತೆಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ ಮಂಸೋರೆ.

ವಿಭಿನ್ನವಾದ ಪೋಸ್ಟರ್​ವೊಂದನ್ನ ರಿಲೀಸ್​ ಮಾಡಿ, ಮಂಸೋರೆ ಇಂದು ಈ ಸಿನಿಮಾದ ಅಧಿಕೃತ ಅನೌನ್ಸ್​​ಮೆಂಟ್​ ಮಾಡಿದ್ದಾರೆ. ‘ಅಬ್ಬಕ್ಕ’- ಅರಬ್ಬೀ ಸಮುದ್ರದ ಅಭಯರಾಣಿ ಅನ್ನೋ ಟೈಟಲ್​ ಸಿನಿಮಾಗೆ ಇಡಲಾಗಿದೆ. ಅಂದ್ಹಾಗೇ ಆರು ಭಾಷೆಗಳಲ್ಲಿ ‘ಅಬ್ಬಕ್ಕ’ ಸಿನಿಮಾ ಮೂಡಿ ಬರಲಿದೆ ಅನ್ನುವ ಸುಳಿವನ್ನೂ ಪೋಸ್ಟರ್​ ಮೂಲಕವೇ ತಿಳಿಸಿದ್ದಾರೆ ಮಂಸೋರೆ. ಹೌದು.. ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಅಬ್ಬಕ್ಕ ಸಿನಿಮಾ ತೆರೆ ಕಾಣಲಿದೆ.

ಇನ್ನೂ ಮಂಸೋರೆ ಜತೆಗೆ ‘ಆಕ್ಟ್ 1978’ ಚಿತ್ರದಲ್ಲಿ ಕೆಲಸ ಮಾಡಿದ ತಾಂತ್ರಿಕ ತಂಡ ‘ಅಬ್ಬಕ್ಕ’ ಚಿತ್ರತಂಡದಲ್ಲೂ ಮುಂದುವರಿಯಲಿದೆ. ಛಾಯಾಗ್ರಾಹಕರಾಗಿ ಸತ್ಯ ಹೆಗಡೆ, ಕಲಾ ನಿರ್ದೇಶಕರಾಗಿ ಮಹವೀರ್‌ ಸಾಬಣ್ಣವರ್‌, ಸಂತೋಷ್‌ ಪಾಂಚಲ್‌, ನಿರ್ದೇಶನ ಹಾಗೂ ರೈಟಿಂಗ್‌ ತಂಡದಲ್ಲಿ ವೀರೇಂದ್ರ ಮಲ್ಲಣ್ಣ ಅವರಿದ್ದಾರೆ. ಸಂಗೀತ ನಿರ್ದೇಶಕರಾಗಿ ಅಜನಿಶ್‌ ಲೋಕನಾಥ್‌ ಹೊಸದಾಗಿ ಸೇರಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top