fbpx
ಸಮಾಚಾರ

ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್: ಮಗನಿಂದಲೇ ನಡೆಯಿತಾ ದುಷ್ಕೃತ್ಯ?

ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಗೂ ಅವರ ಚಾಲಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬರುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವರ್ತೂರು ಪ್ರಕಾಶ್ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಇಲ್ಲಿ ಇವರು ಕೊಡುತ್ತಿರುವ ಹೇಳಿಕೆ ಸಾಕಷ್ಟು ಗೊಂದಲವನ್ನು ಹುಟ್ಟು ಹಾಕುತ್ತಿದೆ. ಹಾಗಾದರೆ ಕಿಡ್ನಾಪ್ ಮಾಡಿದ್ಯಾರು? ಹಣಕ್ಕಾಗಿ ಈ ರೀತಿ ಮಾಡಿದ್ರಾ? ಈ ಎಲ್ಲಾ ಬೆಳವಣಿಗೆಗಳ ನಡುವೆ, ಇವರ ಮಗನೇ ಕಿಡ್ನಾಪ್ ಹಿಂದಿನ ರೂವಾರಿ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ. ಈ ಬಗ್ಗೆ ಕನ್ನಡ ದಿನಪತ್ರಿಕೆಯೊಂದು ವರದಿ ಮಾಡಿದ್ದು ಅನೇಕ ವಿಚಾರಗಳನ್ನು ಬಯಲಿಗೆಳೆದಿದೆ.

ಕೋಲಾರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವರ್ತೂರು ಪ್ರಕಾಶ್‌ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಕೋಲಾರ ಸಮೀಪದ ಫಾರಂ ಹೌಸ್‌ ಹಾಗೂ ಬೆಂಗಳೂರಿನ ಮನೆಯಲ್ಲಿ ಅವರು ವಾಸಿಸುತ್ತಿದ್ದರು.

“ವರ್ತೂರು ಪ್ರಕಾಶ್‌ ಅವರು ಟೇಕಲ್‌ ಬಳಿ ಫಾರ್ಮ್‌ ಹೌಸ್‌ ಖರೀದಿಸಿದ್ದರು. ಫಾರ್ಮ್‌ ಹೌಸ್‌ ನೋಡಿಕೊಳ್ಳಲು ಮಹಿಳೆಯೋರ್ವರ ನೇಮಕ ಮಾಡಿದ್ದಾರೆ. ಅ ಮಹಿಳೆ ಜತೆ ಅವರಿಗೆ ಎರಡನೆ ಮದುವೆ ಆಗಿರುವ ಅನುಮಾನಗಳು ವ್ಯಕ್ತವಾಗಿವೆ. ಆಕೆಗೆ ಪ್ರಕಾಶ್‌ ಅವರು ಟೀಚರ್‌ ಎಂದೇ ಕರೆಯುತ್ತಿದ್ದರು. ಆ ಟೀಚರ್‌ಗೆ ಎರಡು ಗಂಡು ಮಕ್ಕಳಿದ್ದು ಆ ಪೈಕಿ ಮೊದಲನೆ ಮಗ ಹಾಗೂ ಪ್ರಕಾಶ್‌ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಆತನೇ ಕಿಡ್ನಾಪ್‌ ಮಾಡಿರಬಹುದು ಎನ್ನುವ ಅನುಮಾನವೂ ಇದೆ.” ಎಂದು ಕನ್ನಡ ದಿನಪತ್ರಿಕೆಯೊಂದು ವರದಿ ಮಾಡಿದೆ.

ಮತ್ತೂಂದೆಡೆ ಕಾರಿನ ಹಿಂದಿನ ಸೀಟಿನಲ್ಲಿ ಮಹಿಳೆಯರು ಧರಿಸುವ ವೇಲ್‌ ಮಾದರಿಯ ಬಟ್ಟೆ ಸಿಕ್ಕಿದೆ. ಜತೆಗೆ ಮುಂದಿನ ಸೀಟಿನಲ್ಲಿ ಖಾರದ ಪುಡಿ ಎರಚಾಡಿರುವುದು ಪತ್ತೆಯಾಗಿದೆ. ಆದರೆ, ಪ್ರಕರಣ ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಿರುವುದರಿಂದ ಕಾರನ್ನು ಜಪ್ತಿ ಮಾಡಿ ಕಾರನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top