fbpx
ಸಮಾಚಾರ

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು: ಬಿಸಿ ಪಾಟೀಲ್ ವಿರುದ್ಧ ಬಿಜೆಪಿಯಲ್ಲೇ ಅಸಮಾಧಾನ

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಕೃಷಿ ಸಚಿವ ಬಿಸಿ ಪಾಟೀಲ್​ ಅವರ ಹೇಳಿಕೆ ಸಾಕಷ್ಟು ವಿವಾದ ಎಬ್ಬಿಸಿದೆ. ಅನ್ನದಾತರ ಬಗ್ಗೆ ಸಚಿವರ ಹೇಳಿಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣಾ ಕಡಾಡಿ ಕೂಡ ಬಿ.ಸಿ ಪಾಟೀಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹೌದು, ರೈತರು ಸ್ವಾಭಿಮಾನಿಗಳು, ಎಂದಿಗೂ ರೈತರು ಹೇಡಿಗಳಾಗಿಲ್ಲ. ಮಾತಿನ ಭರದಲ್ಲಿ ಸಚಿವರು ಹೇಳಿರಬಹುದು. ಕೃಷಿ ಸಚಿವರಿಗೆ ತಮ್ಮ ಹೇಳಿಕೆ ವಾಪಸ್ ಪಡೆಯಲು ಮನವಿ ಮಾಡುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದ್ದಾರೆ.

“ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಅರ್ಥದಲ್ಲಿ ಹೇಳಲು ಹೋಗಿ ಅಪಾರ್ಥ ಸೃಷ್ಟಿಯಾಗಿದೆ. ಕೃಷಿ ನಂಬಿದ ರೈತ ಸ್ವಾಭಿಮಾನಿ, ಯಾರ ಬಳಿಯೂ ಕೈಯೊಡ್ಡಿ ಬದುಕಲ್ಲ. ಇನ್ನೊಬ್ಬರಿಗೆ ಅನ್ನ ಕೊಟ್ಟು ತಾನು ಸಹ ಬದುಕಿದಂತಹ ಸ್ವಾಭಿಮಾನಿ. ಕೃಷಿ ಸಚಿವರು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಕಳಕಳಿ ಇಟ್ಟುಕೊಂಡು ಹೇಳಲು ಹೋಗಿದ್ದಾರೆ. ಈ ವೇಳೆ ಎಡವಟ್ಟಿನ ಮಾತನ್ನಾಡಿದ್ದಾರೆ ಎನಿಸುತ್ತದೆ” ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top