fbpx
ಸಮಾಚಾರ

‘ಸಲಾರ್’ ಟೈಟಲ್ ವಿವಾದ: ಶೀರ್ಷಿಕೆ ಬಗ್ಗೆ ಕೊನೆಗೂ ಮೌನ ಮುರಿದ ಪ್ರಶಾಂತ್ ನೀಲ್

ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಮೊನ್ನೆ ತಾನೇ ಘೋಷಣೆಯಾಗಿದೆ. ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೀರೋ ಆಗಿ ಅಭಿನಯಿಸಲಿದ್ದಾರೆ.

ಈ ಸಿನಿಮಾವನ್ನು ಕೆಜಿಎಫ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗಲಿದೆ. ಜೊತೆಗೆ ನೀಲ್ ಪ್ರಭಾಸ್ ಜೋಡಿಯ ಈ ಸಿನಿಮಾಗೆ ‘ಸಲಾರ್’ ಎಂದು ಹೆಸರಿಡಲಾಗಿದೆ. ‘ಸಲಾರ್’ ಎಂಬುದು ಅರಬ್ಬಿ ಹೆಸರು, ಅದನ್ನು ಏಕೆ ಸಿನಿಮಾಕ್ಕೆ ಇಟ್ಟಿರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇನ್ನು ಸಾಕಷ್ಟು ಮಂದಿಗೆ ಸಲಾರ್ ಎಂದರೆ ಏನರ್ಥ ಎಂದು ತಿಳಿದಿರಲಿಲ್ಲ. ಈ ಸಿನಿಮಾದ ಟೈಟಲ್​ ಅರ್ಥ ಹುಡುಕಾಡುತ್ತಿದ್ದರು. ಎಲ್ಲರಿಗೂ ಸೇರಿ ಈಗ ಪ್ರಶಾಂತ್ ನೀಲ್​ ಸಾಮಾಜಿಕ ಜಾಲತಾಣದ ಮೂಲಕ ಸಲಾರ್ ಟೈಟಲ್​ ಬಗ್ಗೆ ಮೌನ ಮುರಿದಿದ್ದಾರೆ. ಸಿನಿಮಾದ ಶೀರ್ಷಿಕೆಯ ಅರ್ಥ ಏನೆಂದು ತಿಳಿಸಿದ್ದಾರೆ.

‘ಈ ಪದಕ್ಕೆ ಹಲವು ಅರ್ಥಗಳಿವೆ. ಅದೊಂದು ಆಡುಮಾತಿನ ಪದ. ಪ್ರಧಾನ ದಂಡನಾಯಕ ಎಂಬ ಅರ್ಥವನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ರಾಜನೊಬ್ಬನ ಬಲಗೈ ಬಂಟ ಎಂದು ಹೇಳಬಹುದು’ ಎನ್ನುವ ಮೂಲಕ ಶೀರ್ಷಿಕೆಗೆ ಸಂಬಂಧಿಸಿದಂತೆ ಅಭಿಮಾನಿಗಳಲ್ಲಿ ಮೂಡಿದ್ದ ಪ್ರಶ್ನೆಗೆ ಪ್ರಶಾಂತ್‌ ನೀಲ್‌ ಉತ್ತರ ನೀಡಿದ್ದಾರೆ.

ಅಲ್ಲದೆ ಸಲಾರ್ ಎಂದರೆ ರಾಜನ ಬಲಗೈ ಬಂಟ ಎಂದೆರ್ಥ. ಅಂದರೆ ಸೇನಾಧಿಪತಿ ಎಂದು ಸಲಾರ್ ಶೀರ್ಷಿಕೆಯ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್​ ಟ್ವೀಟ್​ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top