fbpx
ಸಮಾಚಾರ

‘ಸಲಾರ್‌’ ಚಿತ್ರದ ಟೈಟಲ್ ಬಗ್ಗೆ ತಕರಾರು ತೆಗೆದ ಪ್ರಶಾಂತ್‌ ಸಂಬರಗಿ!

ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಮೊನ್ನೆ ತಾನೇ ಘೋಷಣೆಯಾಗಿದೆ. ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೀರೋ ಆಗಿ ಅಭಿನಯಿಸಲಿದ್ದಾರೆ.

ಈ ಸಿನಿಮಾವನ್ನು ಕೆಜಿಎಫ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗಲಿದೆ. ಜೊತೆಗೆ ನೀಲ್ ಪ್ರಭಾಸ್ ಜೋಡಿಯ ಈ ಸಿನಿಮಾಗೆ ‘ಸಲಾರ್’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆ ಬಗ್ಗೆ ಪ್ರಶಾಂತ್ ಸಂಬರಗಿ ಒಂದು ಮುಖ್ಯವಾದ ಪ್ರಶ್ನೆ ಎತ್ತಿದ್ದಾರೆ.

 

 

ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಸಂಬರಗಿ #shamesalaar ಎಂದು ಹ್ಯಾಶ್‌ ಟ್ಯಾಗ್‌ ಬಳಸಿದ್ದಾರೆ. ‘ಇಂಡಿಯನ್ ಸಿನಿಮಾ ಅಂತ ಹೇಳಿ ಅರೇಬಿಯಾದ ಹೆಸರು ಯಾಕೆ ಇಟ್ಟಿದ್ದೀರಾ ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರ್? ಕನ್ನಡ ಮತ್ತು ಸಂಸ್ಕೃತ ಸೇರಿ ಆರು ಶಾಸ್ತ್ರೀಯ ಭಾಷೆಗಳಲ್ಲಿ ಒಂದೂ ಪದ ಸಿಗಲಿಲ್ಲವಾ ನಿಮಗೆ?'” ಎಂದು ಪ್ರಶಾಂತ್ ಸಂಬರಗಿ ಪ್ರಶ್ನೆ ಮಾಡಿದ್ದಾರೆ.

ಅಷ್ಟಕ್ಕೂ ‘ಸಲಾರ್‌’ ಎಂದರೇನು ಅಂತ ಜನರು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಮುಸ್ಲಿಂ ಹುಡುಗರಿಗೆ ಈ ಹೆಸರು ಇಡಲಾಗುತ್ತದೆ. ‘ಸಲಾರ್‌’ ಎಂದರೆ ಲೀಡರ್ ಎಂಬ ಅರ್ಥವಿದೆ. ನಿರ್ದೇಶಕರು ಯಾಕೆ ಈ ಹೆಸರು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸಿನಿಪ್ರಿಯರ ಮನದಲ್ಲೀಗ ಪ್ರಶ್ನೆ ಉದ್ಭವ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top