fbpx
ಸಮಾಚಾರ

ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಾದ ‘ಮಾಣಿಕ್ಯ’ ನಟಿ: ವರಲಕ್ಷ್ಮಿ ಖಾತೆಯಿಂದ ಅಶ್ಲೀಲ ಫೋಟೋ, ಸಂದೇಶ

ಈಚೆಗೆ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ. ನಟಿಯರಾದ ಮಾನ್ವಿತಾ ಕಾಮತ್, ಆಶಿಕಾ ರಂಗನಾಥ್, ನಟ ದೀಕ್ಷಿತ್ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದರು. ಇದೀಗ ಸೈಬರ್‌ ಕಳ್ಳರು ‘ಮಾಣಿಕ್ಯಾ’ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮಿ ಶರತ್ ಕುಮಾರ್ ಅವರ ಸೋಶಿಯಲ್ ಮೀಡಿಯಾದ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.

ಡಿಸೆಂಬರ್ 2ರಂದು ವರಲಕ್ಷ್ಮಿ ಖಾತೆ ಹ್ಯಾಕ್ ಮಾಡಲಾಗಿತ್ತು. ಕೆಲವು ಅಶ್ಲೀಲ ಫೋಟೋ ಹಾಗೂ ಸಂದೇಶಗಳನ್ನು ಅಪರಿಚಿತ ಖಾತೆಗಳಿಗೆ ಮೆಸೇಜ್‌ ರೀತಿಯಲ್ಲಿ ಶೇರ್ ಮಾಡಲಾಗಿದೆ. ಇನ್‌ಸ್ಟಾಗ್ರಾಂ ತಂತ್ರಜ್ಞರ ತಂಡದ ಜೊತೆ ಸಂಪರ್ಕದಲ್ಲಿರುವ ವರು ಸದ್ಯಕ್ಕೆ ಖಾತೆ ಡೀ-ಆ್ಯಕ್ಟಿವೇಟ್ ಮಾಡಿಸಿದ್ದಾರೆ.

 

 

‘ಮಧ್ಯರಾತ್ರಿ ನನ್ನ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಲಾಗ್‌ಇನ್‌ ಆಗಲು ಸಾಕಷ್ಟು ಪ್ರಯತ್ನಿಸಿರುವೆ. ಆದರೆ ಸಾಧ್ಯವಾಗಲಿಲ್ಲ. ಇನ್‌ಸ್ಟಾಗ್ರಾಂ ತಂಡದ ಜೊತೆ ಸಂಪರ್ಕದಲ್ಲಿರುವೆ. ವೆರಿಫೈಡ್ ಖಾತೆಯಾಗಿರುವುದರಿಂದ ಯಾವುದೇ ದೊಡ್ಡ ತೊಂದರೆ ಆಗುವುದಿಲ್ಲ, ಎಂದಿದ್ದಾರೆ,’ ಎಂದು ವರಲಕ್ಷ್ಮಿ ಹೇಳಿದ್ದಾರೆ.

ಪ್ರಸ್ತುತ ವರಲಕ್ಷ್ಮಿಯ ಟ್ವಿಟ್ಟರ್ ಖಾತೆ ಕಾರ್ಯನಿರ್ವಹಿಸುತ್ತಿಲ್ಲ. ನಟಿಯ ಟ್ವಿಟ್ಟರ್ ಖಾತೆ ಪರಿಶೀಲಿಸಿದರೆ ಓಪನ್ ಆಗ್ತಿಲ್ಲ. ತಮ್ಮ ಖಾತೆಯನ್ನು ಮರಳಿ ಪಡೆಯಲು ನಟಿ ಸೈಬರ್ ತಂಡವನ್ನು ಸಂಪರ್ಕಿಸಿದ್ದು, ಪ್ರಯತ್ನಿಸುತ್ತಿದ್ದಾರೆ.

ಫಾಲೋವರ್ಸ್‌ಗೆ ಮಾಹಿತಿ ನೀಡಿರುವ ವರಲಕ್ಷ್ಮಿ “ನನ್ನ ಇನ್ಸ್ಟಾಗ್ರಾಂ ಅಥವಾ ಟ್ವಿಟ್ಟರ್‌ ಖಾತೆಯಿಂದ ಯಾವುದೇ ಸಂದೇಶಗ ಬಂದರೂ ಅದರ ಬಗ್ಗೆ ಎಚ್ಚರವಹಿಸಿ. ನನ್ನ ಖಾತೆ ನನಗೆ ಸಿಕ್ಕ ನಂತರ ನಾನು ನಿಮ್ಮನ್ನು ಸಂಪರ್ಕಿಸುತ್ತೇನೆ. ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು, ಶೀಘ್ರದಲ್ಲೇ ನಿಮ್ಮನ್ನು ಆನ್‌ಲೈನ್‌ನಲ್ಲಿ ಮತ್ತೆ ನೋಡುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top