fbpx
ಸಮಾಚಾರ

ರಾಧಕ್ಕ, ಸೋನು ಗೌಡ, ಡ್ರೋನ್ ಪ್ರತಾಪ್: ಈ ಭಾರಿಯ ಬಿಗ್ ಬಾಸ್ ಮನೆಗೆ ಹೋಗೋರು ಇವರೇನಾ?

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಎಂಬ ಹೆಸರು ಗಿಟ್ಟಿಸಿರುವ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನಿನ ಬಗ್ಗೆ ನಾನಾ ಗಾಸಿಪ್’ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ..

ಒಂದಷ್ಟು ಮನರಂಜನೆಯ ಜೊತೆಗೆ ಸ್ಪರ್ಧಿಗಳ ನಡುವಿನ ರಂಪಾಟ, ಸಣ್ಣತನ, ಕಿರಿಕ್ಕುಗಳೇ ಜೀವಾಳವಾಗಿರೋ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಜನರಿಗೆ ತಕರಾರಿದೆ. ಇದು ನಮ್ಮ ಕನ್ನಡ ನೆಲಕ್ಕೆ ಒಗ್ಗದ ಕಾನ್ಸೆಪ್ಟ್ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿರುತ್ತದೆ. ಇಂಥ ನೂರೆಂಟು ತಾತ್ಸಾರದ ಮಾತುಗಳ ನಡುವೆಯೂ ಬರೋಬ್ಬರಿ ಏಳು ಸೀಸನ್ನುಗಳನ್ನು ಮುಗಿಸಿರುವ ಬಿಗ್ ಬಾಸ್ ಇದೀಗ ಎಂಟನೇ ಬಾರಿಗೆ ಕನ್ನಡ ಪ್ರೇಕ್ಷಕರ ಬಳಿಗೆ ಲಗ್ಗೆಯಿಡುತ್ತಿದೆ..

 

 

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪಟ್ಟಿಯಲ್ಲಿ ಜೊತೆ ಜೊತೆಯಲಿ ನಟ ಆರ್ಯವರ್ಧನ್, ನ್ಯೂಸ್‌ ರೀಡರ್‌ ರಾಧಾ ಹಿರೇಗೌಡರ್, ದಿವ್ಯಾ, ಡ್ರೋನ್ ಪ್ರತಾಪ್, ನಿತ್ಯಾನಂದ, ಟಿಕ್ ಟಾಕ್‌ ಚೆಲುವೆ ಸೋನು ಗೌಡ, ಬಿಂದು ಗೌಡ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದವರ ಅನೇಕ ಹೆಸರುಗಳಿವೆ. ಆದರೆ ಇವ್ಯಾವೂ ಅಧಿಕೃತ ಹೆಸರುಗಳಲ್ಲ

ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ ಎಂಟನೇ ಅವತರಣಿಕೆಗೆ ಈಗಾಗಲೇ ಸ್ಪರ್ಧಿಗಳನ್ನು ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ.. ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ಆದರೆ ಜನವರಿ ವೇಳೆಗೆ ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡೋದಂತೂ ಕನ್ಫರ್ಮ್ ಅಂತೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top