fbpx
ಸಮಾಚಾರ

“ಪ್ರಭಾಸ್‌ ಜೊತೆಯಲ್ಲೇ‌ ಸಿನಿಮಾ ಮಾಡಲು ನಿರ್ಧರಿಸಿದ್ದು ಏಕೆ?” ಕಾರಣ ಹೇಳಿದ ‘KGF’ ನಿರ್ದೇಶಕ!

ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಮೊನ್ನೆ ತಾನೇ ಘೋಷಣೆಯಾಗಿದೆ. ಈ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೀರೋ ಆಗಿ ಅಭಿನಯಿಸಲಿದ್ದಾರೆ.

ಈ ಸಿನಿಮಾವನ್ನು ಕೆಜಿಎಫ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗಲಿದೆ. ಜೊತೆಗೆ ನೀಲ್ ಪ್ರಭಾಸ್ ಜೋಡಿಯ ಈ ಸಿನಿಮಾಗೆ ‘ಸಲಾರ್’ ಎಂದು ಹೆಸರಿಡಲಾಗಿದೆ. ಬೇರೆ ಭಾಷೆಯ ನಟನನ್ನ ಹಾಕಿಕೊಂಡು ಪ್ರಶಾಂತ್​ ನೀಲ್​ ಪ್ಯಾನ್​ ಇಂಡಿಯಾ ಸಿನಿಮಾ ಮಾಡಲು ಹೊರಟಿರೋದು ಕೆಲವು ಕನ್ನಡ ಚಿತ್ರರಸಿಕರ ಬೇಸರಕ್ಕೆ ಕಾರಣವಾಗಿದೆ. ಅದರ ಬಗ್ಗೆ ಇದೇ ಮೊದಲ ಬಾರಿಗೆ ಪ್ರಶಾಂತ್‌ ನೀಲ್‌ ಮೌನ ಮುರಿದಿದ್ದಾರೆ.

ಕನ್ನಡಿಗರನ್ನ ಬಿಟ್ಟು ಪ್ರಭಾಸ್​ರನ್ನೇ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ವಿಷಯದ ಬಗ್ಗೆ ಏನೂ ಕಮೆಂಟ್​ ಮಾಡುವುದಿಲ್ಲ ಎಂದಿದ್ದಾರೆ ಪ್ರಶಾಂತ್ ನೀಲ್​. ಅಷ್ಟೇ ಅಲ್ಲ, ಸಿನಿಮಾ ರಿಲೀಸ್​ ಆದ ನಂತರ ಇದಕ್ಕೆ ಉತ್ತರಿಸುವುದಾಗಿ ತಿಳಿಸಿದ್ದಾರೆ. ಪ್ರಭಾಸ್​ ಅವರ ಅಮಾಯಕತೆ ತನ್ನನ್ನು ಆಕರ್ಷಿಸಿತು. ಅವರ ಅಮಾಯಕತೆಯನ್ನು ಬೆಳ್ಳಿ ತೆರೆಯ ಮೇಲೆ ತೋರಿಸಲು ತುಂಬಾ ಚೆನ್ನಾಗಿರುತ್ತೆ ಎಂದಿದ್ದಾರೆ ಪ್ರಶಾಂತ್ ನೀಲ್​.

‘ಪ್ರಭಾಸ್‌ ಅವರ ಮುಗ್ಧತೆ ನನಗೆ ತುಂಬ ಆಕರ್ಷಕ ಎನಿಸಿತು. ಬೇರೆ ನಟರಿಗೆ ಹೋಲಿಸಿದರೆ ಪ್ರಭಾಸ್‌ ಹೆಚ್ಚು ಮುಗ್ಧತೆಯನ್ನು ಅಭಿವ್ಯಕ್ತಿಸುತ್ತಾರೆ. ಸಿನಿಮಾದಲ್ಲಿ ಅದನ್ನು ತೋರಿಸುವುದು ಅದ್ಭುತ ಎನಿಸುತ್ತದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಪ್ರಶಾಂತ್‌ ನೀಲ್‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top