fbpx
ಸಮಾಚಾರ

ಗೆಲುವಿನ ಲಯದಲ್ಲಿದ್ದ ಟೀಮ್ ಇಂಡಿಯಾಗೆ ಶಾಕ್: ಉಳಿದ ಪಂದ್ಯಗಳಿಂದ ಸ್ಟಾರ್ ಆಟಗಾರ ಔಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ2ಐ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಹಿನ್ನಡೆಯ ಸಂಗತಿಯೊಂದು ಕೇಳಿ ಬಂದಿದೆ. ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಟಿ20ಐ ಸರಣಿಯ ಇನ್ನುಳಿದ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಗಾಯಕ್ಕೀಡಾಗಿದ್ದರಿಂದ ಜಡೇಜಾ ಇನ್ನುಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ. ಜಡೇಜಾ ಬದಲಿಗೆ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

 

 

ಕ್ಯಾನ್‌ಬೆರ್ರಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ರವೀಂದ್ರ ಜಡೇಜಾ ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಆಸ್ಟ್ರೇಲಿಯಾ ವಿರುದ್ದದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ಜಡೇಜಾ ಹೆಲ್ಮೆಟ್‌ಗೆ ಸ್ಟಾರ್ಕ್‌ ಹಾಕಿದ ಬೌನ್ಸರ್ ಬಲವಾಗಿ ಬಡಿದಿತ್ತು.

ಬಿಸಿಸಿಐನ ವೈದ್ಯಾಧಿಕಾರಿಗಳು ರವೀಂದ್ರ ಜಡೇಜಾ ಅವರ ಸ್ಥಿತಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದೂ, ಶನಿವಾರ ಅಗತ್ಯದ ಸ್ಕ್ಯಾನಿಂಗ್‌ಗೆ ಒಳಪಡಿಸಲಿದ್ದಾರೆ. ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್‌ ಇಂಡಿಯಾ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಎಸೆದ ಎಸೆತ ಜಡೇಜಾ ಬ್ಯಾಟಿನಂಚಿಗೆ ತಾಗಿ ನಂತರ ಬಲವಾಗಿ ಹೆಲ್ಮೆಟ್‌ಗೆ ಬಡಿದಿತ್ತು.

ಬಳಿಕ ಇನಿಂಗ್ಸ್‌ ಬ್ರೇಕ್‌ನಲ್ಲಿ ಟೀಮ್‌ ಇಂಡಿಯಾ ವೈದ್ಯಾಧಿಕಾರಿಗಳ ಎದುರು ಜಡೇಜಾ ಕೊಂಚ ತಲೆ ತಿರುಗುತ್ತಿರುವ ಅನುಭವ ಆಗುತ್ತಿರುವುದಾಗಿ ಹೇಳಿಕೊಂಡ ಕಾರಣ ಕನ್ಕಷನ್‌ ಸಬ್‌ಸ್ಟಿಟ್ಯೂಟ್‌ ಮೂಲಕ ಜಡೇಜಾ ಬದಲಿಗೆ ಯುಜ್ವೇಂದ್ರ ಚಹಲ್‌ ಅವರನ್ನು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಿಸಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top