ಮಂಡ್ಯ ಜಿಲ್ಲೆಯ ಮದ್ದೂರಿನ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೀಗ, ಕನ್ನಡ ನಟ ಕಿಚ್ಚ ಸುದೀಪ್ ಸಹ ಖಂಡಿಸಿದ್ದು, ಆ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ ಎಂದು ಆಗ್ರಹಿಸಿದ್ದಾರೆ. ಘೋರ ಘಟನೆ ನಡೆದಿದ್ದು ಕಿಚ್ಚ ಸುದೀಪ್ ತಮ್ಮ ಟ್ರಸ್ಟ್ ಪರವಾಗಿ ಆಗ್ರಹ ಮುಂದೆ ಇಟ್ಟಿದ್ದಾರೆ.
Hoping tat justice is done and a example is set with the punishment,,,and a right warning is sent to those who even dare think of such brutal acts again.#JusticrForAaratiBai pic.twitter.com/zBvDvFg3Hj
— Kichcha Sudeepa (@KicchaSudeep) December 4, 2020
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ, ಈ ಪ್ರಕರಣದಲ್ಲಿ ಬಾಲಕಿಗೆ ನ್ಯಾಯ ಸಿಗುತ್ತದೆ ಮತ್ತು ತಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದೆ ಈ ರೀತಿ ಮಾಡುವವರಿಗೆ ತೀವ್ರ ತರಹದ ಸಂದೇಶ ರವಾನೆಯಾಗಲಿದೆ ಎಂದು ಭಾವಿಸಿದ್ದೇನೆ. ಈ ಮೂಲಕ ಮುಂದೆ ಈ ರೀತಿ ಕ್ರೂರ ಕೃತ್ಯ ಮಾಡಲು ಯೋಚಿಸುವವರಿಗೆ ಒಂದು ಎಚ್ಚರಿಕೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಏನಿದು ಘಟನೆ?
ಮೂಲತಃ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕುಟುಂಬ ಕೆಲಸ ಅರಸಿ ಮಂಡ್ಯಕ್ಕೆ ಬಂದಿತ್ತು. ಹುರಗಲವಾಡಿ ಗ್ರಾಮದ ರೈತ ಚೆಲುವರಾಜ್ ಎಂಬವರ ಕಬ್ಬಿನಗದ್ದೆಯಲ್ಲಿ ಬುಧವಾರ ಕಬ್ಬು ಕಟಾವಿಗೆ ಬಾಲಕಿ ಗದ್ದೆಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನ ಎಳೆದೊಯ್ದ ಕಾಮುಕ ಕಿರಾತಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದು ಶವವನ್ನು ಕಬ್ಬಿನ ಗದ್ದೆಯಲ್ಲಿ ಎಸೆದು ಹೋಗಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
