fbpx
ಸಮಾಚಾರ

ನಟ ಧನಂಜಯ್ ಹೆಸರಲ್ಲಿ ವಂಚನೆ: ಹುಷಾರ್ ಎಂದ ಡಾಲಿ

ಆನ್​ಲೈನ್​ನಲ್ಲಿ ಇತ್ತೀಚೆಗೆ ವಂಚನೆ ಮಾಡುವ ಜಾಲಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹುಟ್ಟಿಕೊಳ್ಳುತ್ತಿದೆ. ನಟ-ನಟಿಯರ ಹೆಸರು ಹೇಳಿಕೊಂಡು ದುಡ್ಡು ಹೊಡೆಯುವುದು, ಮೋಸ ಮಾಡುವುದು ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಇದೀಗ ನಟ ಧನಂಜಯ್ ಹೆಸರು ಬಳಸಿಕೊಂಡು ವಂಚನೆ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಧನಂಜಯ್​ ತಮ್ಮ ಟ್ವಿಟರ್ ಅಕೌಂಟ್​ನಲ್ಲಿ ಫೇಸ್​ಬುಕ್​ನಲ್ಲಿ ಪ್ರಕಟವಾಗಿದ್ದ ಸ್ಕ್ರೀನ್​ಶಾಟ್​ ಒಂದನ್ನು ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ, ಹೊಸ ಕನ್ನಡ ಸಿನಿಮಾಗೆ ನಾವು ಪೋಷಕ ಪಾತ್ರಧಾರಿಗಳನ್ನು ಹುಡುಕುತ್ತಿದ್ದೇವೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್​ ನಟಿಸುತ್ತಿದ್ದಾರೆ. ಯಾರಿಗಾದರೂ ಆಸಕ್ತಿ ಇದ್ದರೆ ಇನ್​ಬಾಕ್ಸ್​ನಲ್ಲಿ ಮೆಸೇಜ್​ ಮಾಡಿ. ವೃತ್ತಿಪರರಿಗೆ ಮಾತ್ರ ಆದ್ಯತೆ ಎಂದಿತ್ತು.

 

 

ಈ ಬಗ್ಗೆ ಬರೆದಿರುವ ಧನಂಜಯ್​, ಈ ರೀತಿಯ ಪೋಸ್ಟ್​​​ಗಳನ್ನು ನಂಬಿ ಮೋಸ ಹೋಗಬೇಡಿ. ಈ ತರಹ ಎರಡು ಮೂರು ಘಟನೆಗಳು ಗಮನಕ್ಕೆ ಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಯಾವುದೇ ವಿಚಾರವನ್ನು ನಂಬುವ ಮೊದಲು ಪರಿಶೀಲನೆ ನಡೆಸಿ ಎಂದು ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top