fbpx
ಸಮಾಚಾರ

ಹುಟ್ಟಿನಿಂದಲೇ ಎರಡೂ ಕೈ ಕಳೆದುಕೊಂಡಿದ್ದ ನತದೃಷ್ಟ ಬಾಲಕನಿಗೆ ಮರು ಜನ್ಮ ನೀಡಿದ ಸಂಸದ ಜಿಸಿ ಚಂದ್ರಶೇಖರ್

ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಬೈಲಹೊಂಗಲ ತಾಲೂಕಿನ ಬಡ ಹುಡುಗನ ಬಾಳಿಗೆ ಬೆಳಕಾಗಿ ಪರಣಮಿಸಿದ್ದಾರೆ. ಎರಡೂ ಕೈಗಳಿಲ್ಲದೆ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಕಿರಣ ಫಕ್ಕೀರಪ್ಪಾ ಎಂಬ ಪುಟ್ಟ ಬಾಲಕನಿಗೆ ಅವರಿಗೆ ಕೃತಕ ಕೈ ಜೋಡಣೆಗೆ ಅಗತ್ಯವಾಗುವ ಧನಸಹಾಯ ಮಾಡಿದ್ದರು. ಇದೀಗ ಆ ಹುಡುಗನಿಗೆ ಕೃತಕ ಕೈ ಜೋಡಣೆ ಯಶಸ್ವಿಯಾಗಿದೆ.

ಸುಮಾರು ಒಂದೂವರೆ ವರ್ಷದ ಹಿಂದೆ ಕನ್ನಡದ ಖಾಸಗಿ ಸುದ್ದಿವಾಹಿನಿ ಸುವರ್ಣ ನ್ಯೂಸ್ ಈ ಹುಡುಗನ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಂಡಿರುವ ಕಿರಣ್ ಗೆ ಕೃತಕ ಕೈ ಜೋಡಿಸಲು ಸಹಾಯ ಮಾಡುವಂತೆ ಸುವರ್ಣ ನ್ಯೂಸ್ ವಿಶೇಷ ವರದಿಯನ್ನು ಪ್ರಸಾರ ಮಾಡಿತ್ತು. ‘ಕೈಯಿಲ್ಲದಿದ್ದರು ಸ್ವಾವಲಂಬಿಯಾಗಿ ಬದುಕುತ್ತಿರುವ ಬಾಲಕ’ ಎಂಬ ಶೀರ್ಷಿಕೆಯಡಿಯಲ್ಲಿ ಸುವರ್ಣ ನ್ಯೂಸ್ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತ್ತು.

 

 

ಈ ವರದಿಯು ಸಂಸದ ಜಿಸಿ ಚಂದ್ರಶೇಖರ್ ಅವರ ಗಮನಕ್ಕೆ ಬಂದಿದ್ದು ತಕ್ಷಣವೇ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಸಂಸದರ ಪರಿಹಾರ ನಿಧಿಯಿಂದ ಮಗುವಿನ ಸಂಪೂರ್ಣ ಚಿಕಿತ್ಸೆಯ ವೆಚ್ಚ ಹಾಗು ಕೃತಕ ಕೈಜೋಡಿಸುವಿಕೆ ಪರಿಕರಗಳ ವೆಚ್ಚವನ್ನು ಭರಿಸಲು ಜಿಸಿ ಚಂದ್ರಶೇಖರ್ ನಿರ್ಧರಿಸಿದ್ದರು.

 

 

ಜಿಸಿ ಚಂದ್ರಶೇಖರ್ ಅವರ ನೆರವಿನ ಸಹಾಯದಿಂದ ಅಮೆರಿಕಾದಿಂದ ಕೃತಕ ಕೈಗಳನ್ನು ತರಿಸಿಲಾಗಿತ್ತು. ಪ್ರೊಸ್ಥೆಟಿಕ್ಸ್ ಹಾಗು ಅರ್ಥೊಟಿಕ್ಸ್ ತಜ್ಞ ವೈದ್ಯರೊಂದಿಗೆ ಮಾತುಕತೆ ನಡೆಸಿ ಚಿಕಿತ್ಸೆಯ ವೆಚ್ಚವನ್ನು ಕೂಡ ಸಂಸದರೇ ಭರಿಸಿದ್ದರು. ಅಂತಿಮವಾಗಿ ಕಿರಣ್ ಗೆ ಕೃತಕ ಕೈ ಜೋಡಣೆ ಯಶಸ್ವಿಯಾಗಿ ನೆರವೇರಿದೆ. ಒಂದು ತಿಂಗಳ ಹಿಂದೆಯಷ್ಟೇ ಕಿರಣ್ ಗೆ ಕೃತಕ ಕೈ ಜೋಡಣೆ ನಡೆದಿದ್ದು ಈಗಷ್ಟೇ ಕೈ ಮೂಲಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಕಿರಣ್ ಆರಂಭಿಸಿದ್ದಾನೆ.

ಕಿರಣ್ ಗೆ ಯಶಸ್ವಿಯಾಗಿ ಕೈ ಜೋಡಣೆಯಾದ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಮತ್ತೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸಂಸದ ಜಿಸಿ ಚಂದ್ರಶೇಖರ್ ಅವರು ಕೂಡ ಭಾಗವಹಿಸಿದ್ದರು. ಕಿರಣ್ ನ ಕೃತಕ ಕೈಗಳ ಜೊತೆಯಲ್ಲಿ ನೋಡಿದ ಚಂದ್ರಶೇಖರ್ ಅವರಿಗೆ ಸಾರ್ಥಕ ಭಾವನೆ ಮೂಡಿತ್ತು. ಇದೆ ವೇಳೆ ಕಿರಣ್ ನ ಹಿಂದಿನ ಸ್ಥಿತಿಯನ್ನು ನೆನೆದು ಭಾವುಕರಾದರು. ಕೊನೆಯಲ್ಲಿ ಜಿಸಿ ಚಂದ್ರಶೇಖರ್ ಅವರು ಮಾಡಿದ ಈ ಮಹತ್ಕಾರ್ಯಕ್ಕೆ ಸುವರ್ಣ ನ್ಯೂಸ್ ವತಿಯಿಂದ ಸನ್ಮಾನ ಮಾಡಲಾಯಿತು.

“ಬಾಲಕ ಕಿರಣ್ ತುಂಬಾ ಚೂಟಿ ಇದ್ದು ಮಗುವಿನ ಭವಿಷ್ಯ ಮುಂದೆ ಉಜ್ವಲವಾಗಿ ಬೆಳಗಬೇಕು, ದೇವರ ಕೃಪೆಯಿಂದ ಆತನ ಆಶಯಗಳು ಈಡೇರಬೇಕಿದೆ, ತನ್ನ ತಂದೆಯನ್ನು ಈಗಾಗಲೇ ಕಳೆದುಕೊಂಡಿರುವ ಕಿರಣ್ ಹಿರಿಯ ಮಗನಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ತಾಯಿ ಹಾಗು ಪುಟ್ಟ ತಮ್ಮನ ಬಾಳಿಗೆ ನಿಲ್ಲಬೇಕಾದ ಅವಶ್ಯಕತೆಯಿದೆ. ಆದ್ದರಿಂದ ಮಗುವಿನ ಚಿಕಿತ್ಸೆ ಮಾಡಿಸಲು ನೆರವು ನೀಡಿದ್ದೇವೆ” ಎನ್ನುತ್ತಾರೆ ಸಂಸದ ಜಿಸಿ ಚಂದ್ರಶೇಖರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top