fbpx
ಸಮಾಚಾರ

ನಟ ದಿಲೀಪ್ ಕುಮಾರ್ ಆರೋಗ್ಯ ಸ್ಥಿತಿ ಚಿಂತಾಜನಕ: ಅಭಿಮಾನಿಗಳಲ್ಲಿ ದಿಲೀಪ್ ಪತ್ನಿಯ ವಿಶೇಷ ಮನವಿ

ಭಾರತೀಯ ಸಿನಿರಂಗದಲ್ಲೇ ಅತ್ಯುತ್ತಮ ನಟ ಎಂಬ ಖ್ಯಾತಿಗೆ ಭಾಜನರಾಗಿರುವ ದಿಲೀಪ್ ಕುಮಾರ್ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ವಿಭಿನ್ನ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ದಿಲೀಪ್ ಇನ್ನೇನು ಕೆಲ ದಿನಗಳಲ್ಲಿ 98ನೇ ವಯಸ್ಸಿಗೆ ಕಾಲಿರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದಿಲೀಪ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ದಿಲೀಪ್‌ ಪತ್ನಿ ಸಾಯಿರಾ ಬಾನು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ನನ್ನ ಗಂಡನ ಆರೋಗ್ಯ ಸ್ವಲ್ಪ ಹದಗೆಟ್ಟಿದೆ, ಅವರು ಅಷ್ಟೇನು ಆರೋಗ್ಯವಾಗಿಲ್ಲ. ಅವರಿಗಾಗಿ ಪ್ರಾರ್ಥಿಸಿ’ ಎಂದಿದ್ದಾರೆ. ದಿಲೀಪ್ ಬಹಳ ಬಳಲಿದ್ದಾರೆ. ಅವರಿಗೆ ಮನೆಯಲ್ಲಿಯೇ ಓಡಾಡಲು ಸಾಧ್ಯವಾಗುತ್ತಿಲ್ಲ. ದಿಲೀಪ್ ಅವರ ರೋಗನಿರೋಧಕ ಶಕ್ತಿ ಸಹ ಕುಂದಿದೆ. ಅವರ ಆರೋಗ್ಯ ಆತಂಕಕ್ಕೆ ಈಡುಮಾಡಿದೆ ಎಂದಿದ್ದಾರೆ ದಿಲೀಪ್ ಪತ್ನಿ ಸಾಯಿರಾ ಬಾನು.

ದಿಲೀಪ್‌ ಅವರ ಅನಾರೋಗ್ಯದ ಬಗ್ಗೆ ಸುದ್ದಿ ಕೇಳಿದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಲು ಆರಂಭಿಸಿದ್ದರಿಂದ ಸಾಯಿರಾ ಅವರು ಈ ರೀತಿ ಹೊಸದಾಗಿ ಹೇಳಿಕೆ ನೀಡಿದ್ದಾರೆ. ಕೋವಿಡ್‌-19 ಭೀತಿ ಇರುವುದರಿಂದ ಮೊದಲಿನಿಂದಲೂ ದಿಲೀಪ್‌ ಅವರನ್ನು ಸಂಪೂರ್ಣ ಐಸೊಲೇಟ್‌ ಮಾಡಲಾಗಿದೆ. ಅವರನ್ನು ಭೇಟಿಯಾಗಲು ಹೊರಗಿನವರಿಗೆ ಅವಕಾಶ ನೀಡಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top