fbpx
ಸಮಾಚಾರ

ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್​ಗೆ ಬಂದ ಖ್ಯಾತ ನಟಿ ಬೆಳಿಗ್ಗೆ ಶವವಾಗಿ ಪತ್ತೆ

ತಮಿಳಿನ ಅನೇಕ ಧಾರಾವಾಹಿ ಮತ್ತು ಕಿರುತೆರೆ ಕಾರ್ಯಕ್ರಮಗಳ ಮೂಲಕ ಫೇಮಸ್‌ ಆಗಿದ್ದ ನಟಿ ವಿ.ಜೆ. ಚಿತ್ರಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ 28 ವರ್ಷ ವಯಸ್ಸಾಗಿತ್ತು. ಪಂಚತಾರಾ ಹೋಟಲ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆ ಆಗಿರುವ ಬಗ್ಗೆ ವರದಿ ಆಗಿದೆ.

ಈಕೆಯ ಮೃತದೇಹ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲಿನಲ್ಲಿ ನೇನು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವಿಪಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿ ಇಂದು ಮುಂಜಾನೆ 2.30ರ ಸುಮಾರಿಗೆ ಹೋಟೆಲ್ ಗೆ ಮರಳಿದ್ದರು. ನಸುಕಿನ ಜಾವ 3.30ಕ್ಕೆ ಹೋಟೆಲ್‌ ಮ್ಯಾನೇಜರ್‌ ಪೊಲೀಸ್‌
ಸಹಾಯವಾಣಿ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ನಜರತ್‌ಪೇಟೆ ಪೊಲೀಸರು ಸ್ಥಳಕ್ಕೆ
ಆಗಮಿಸಿದಾಗ ಚೈತ್ರಾ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿಗೆ
ಕಾರಣ ಏನೆಂದು ತಿಳಿಯಲು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.

29 ವರ್ಷದ ನಟಿ ಚಿತ್ರಾ ನಿನ್ನೆವರೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರು. ನಿನ್ನೆ ಸಂಜೆ ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಯುವ ನಟಿಯ ಅಗಲಿಕೆ ಅಭಿಮಾನಿಗಳಿಗೆ ಹಾಗೂ ಸಹ ನಟರಿಗೆ ನಿಜಕ್ಕೂ ಆಘಾತ ಉಂಟು ಮಾಡಿದೆ. ಚಿತ್ರಾ ನಟನೆ ಆರಂಭಿಸುವ ಮೊದಲು ನಿರೂಪಕಿಯಾಗಿ ಕಿರುತೆರೆಗೆ ಪರಿಚಯವಾದವರು. ಇವರ ತಂದೆ ಕಾಮರಾಜ್​ ನಿವೃತ್ತ ಪೊಲೀಸ್​ ಅಧಿಕಾರಿ. ಇವರ ಅಣ್ಣ ಪೊಲೀಸ್​ ಕಾನ್​ಸ್ಟೇಬಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಚಿತ್ರಾ ಆತ್ಮಹತ್ಯೆ ವಿಚಾರ ನೋವುಂಟು ಮಾಡಿದ್ದು, ಖಿನ್ನತೆಯೇ ಚಿತ್ರಾ ಸೂಸೈಡ್ ಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರಾ ಆತ್ಮಹತ್ಯೆಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬನೀ ಮಿಡಿಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top