fbpx
ಸಮಾಚಾರ

ಆಸೀಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ದಂಡ

ಸಿಡ್ನಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಆಸ್ಟ್ರೇಲಿಯಾ ವಿರುದ್ದದ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತು. ಇದಾಗ್ಯೂ 2-1 ಅಂತರದಿಂದ ಸರಣಿ ಗೆದ್ದ ಖುಷಿಯಲ್ಲಿದ್ದ ಕೊಹ್ಲಿ ಪಡೆಗೆ, ನಿಧಾನಗತಿಯ ಓವರ್​ಗಾಗಿ ಪಂದ್ಯದ ಸಂಭಾವನೆಯ ಶೇ.20 ರಷ್ಟು ದಂಡ ವಿಧಿಸಲಾಗಿದೆ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮಂಗಳವಾರ ಈ ಪಂದ್ಯ ನಡೆದಿತ್ತು. ಭಾರತ-ಆಸ್ಟ್ರೇಲಿಯಾ ಮೂರನೇ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 12 ರನ್‌ಗಳ ರೋಚಕ ಗೆಲುವು ದಾಖಲಿಸಿತ್ತು. ಆದರೆ ಸರಣಿ 2-1ರಿಂದ ಭಾರತದ ವಶಪಡಿಸಿಕೊಂಡಿದೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಕೊಹ್ಲಿ ತಂಡಕ್ಕೆ ದಂಡ ಬೀಳುತ್ತಿರುವುದು ಇದು ಎರಡನೇ ಸಾರಿ. ಏಕದಿನ ಸರಣಿಯಲ್ಲೂ ಸ್ಲೋ ಓವರ್‌ ರೇಟ್‌ಗಾಗಿ ದಂಡ ವಿಧಿಸಲಾಗಿತ್ತು.

ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಫೀಲ್ಡಿಂಗ್ ತಂಡ ಗಂಟೆಗೆ ಕನಿಷ್ಠ 15 ಓವರ್ ಮುಗಿಸಿರಬೇಕು. ಏಕದಿನ ಕ್ರಿಕೆಟ್‌ನಲ್ಲಾದರೆ 3.5 ಗಂಟೆಗಳಲ್ಲಿ 50 ಓವರ್‌ ಮುಗಿಸಿರಬೇಕು. ಗಂಟೆಗೆ ಕನಿಷ್ಠ 14.28 ಓವರ್‌ ಮುಗಿಸಬೇಕಿರುತ್ತದೆ. ಇನ್ನು ಟಿ20ನಲ್ಲೂ ಗಂಟೆಗೆ 14.28 ಓವರ್‌ನಂತೆ ಡ್ರಿಂಕ್ಸ್ ಬ್ರೇಕ್ ಸೇರಿ ಒಟ್ಟು 75 ನಿಮಿಷಗಳಲ್ಲಿ ಓವರ್‌ ಮುಗಿಸಲು ನಿಯಮವಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top