fbpx
ಸಮಾಚಾರ

‘ಕುಮಾರಸ್ವಾಮಿಯದ್ದು ಪುಟಗೋಸಿ ರಾಜಕಾರಣ’

ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮೇಲೆ‌ ರೈತ‌ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲ ಆಗಿದ್ದಾರೆ. ಇಂದು ಬಾರುಕೋಲು ಚಳುವಳಿ ನಡೆಸಲು ಮುಂದಾಗಿರುವ ಕೋಡಿಹಳ್ಳಿ, ಮಾಜಿ ಸಿಎಂ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಪರಿಷತ್‍ನಲ್ಲಿ ಜೆಡಿಎಸ್ ಬೆಂಬಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರು ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ನಿನ್ನೆ ಬೆಳಗ್ಗೆ ಹೇಳಿತ್ತು. ಆದರೆ ಸಂಜೆ ವೇಳೆ ಉಲ್ಟಾ ಹೊಡೆದು ಯಡಿಯೂರಪ್ಪನರಿಗೆ ಬೆಂಬಲ ಕೋಡುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

ಬಿಎಸ್‍ವೈ ಜೊತೆ ನಿಮಗೆ ಎಷ್ಟು ಡಿಲ್ ಆಗಿದೆ? ಎಷ್ಟು ಶಾಸಕರನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದೀರಿ? ನಿಮ್ಮದು ಜ್ಯಾತ್ಯಾತೀತ ತತ್ವನು ಅಲ್ಲ ಮತ್ತು ರೈತರ ಪರವಾದ ಚಿಂತನೆಯೂ ನಿಮ್ಮ ಪಕ್ಷಕ್ಕಿಲ್ಲ. ನೀವು ಈ ಮಣ್ಣಿನ ದ್ರೋಹಿಗಳು. ನೂರಕ್ಕೆ ನೂರು ಡಿಲ್ ಮಾಡುವುದರಲ್ಲಿ ನೀವು ನಿಸ್ಸಿಮರು ಎಂದು ಆಕ್ರೋಶ ಹೊರಹಾಕಿದರು.

ಇದು ಕುಮಾರಸ್ವಾಮಿಯವರ ಕೊನೆಯ ರಾಜಕಾರಣ. ಅವರು ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ. ಅದನ್ನು ನಿಧಾನಕ್ಕೆ ಮಾಡಿದ್ರೆ ಏನು ಪ್ರಯೋಜನ? ರೈತರ ಸಾಲಮನ್ನಾ ಅವರ ಕಮಿಟ್ಮೆಂಟ್, ಅದನ್ನು ಮಾಡ್ಬೇಕಿತ್ತು ಅಷ್ಟೇ ಎಂದು ಕಿಡಿಕಾರಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಕುಮಾರಸ್ವಾಮಿಯವರನ್ನು ಮಣ್ಣಿನ ಮಕ್ಕಳು ಅಂತಾರೆ. ಆದ್ರೇ ಅಂತವರೇ ರೈತರ ಬಾಯಿಗೆ ಮಣ್ಣು ಹಾಕೋ ಕೆಲಸ ಮಾಡಿದ್ರು. ರೈತರ ಪರ ಕಾಳಜಿಯೇ ಇಲ್ಲ. ಕುಮಾರಸ್ವಾಮಿ ಮಣ್ಣಿನ ಮಕ್ಕಳ ದ್ರೋಹಿ. ಅವರದ್ದು ಏನಿದ್ದರೂ ಪುಟಗೋಸಿ ರಾಜಕಾರಣ ಎಂಬುದಾಗಿ ವಾಗ್ದಾಳಿ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top