fbpx
ಸಮಾಚಾರ

“ವಿಷ್ಣುವರ್ಧನ್‌ಗೆ ಲೇಡೀಸ್ ವೀಕ್‌ನೆಸ್ ಇತ್ತು, ಆತನ ಕಲರ್ ಹಿಡಿದಿದ್ದೆ” ಏಕವಚನದಲ್ಲಿ ವಿಷ್ಣು ಅವಹೇಳನ ಮಾಡಿದ ನಟ: ಆಕ್ರೋಶಗೊಂಡ ಅಭಿಮಾನಿಗಳು

ಕನ್ನಡ ಚಿತ್ರರಂಗದ ಧೀಮಂತ ನಟ ದಿವಂಗತ ಡಾ.ವಿಷ್ಣುವರ್ಧನ್ ಬಗ್ಗೆ ಪೋಷಕ ನಟನೊಬ್ಬ ನಾಲಿಗೆ ಹರಿಬಿಟ್ಟಿದ್ದಾನೆ. ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳನ್ನೂ ಮಾಡಿ ಗುರುತಿಸಿಕೊಂಡಿರುವ ವಿಜಯ್ ರಂಗರಾಜು ವಿಷ್ಣುದಾದ ವಿರುದ್ಧ ಏಕವಚನದಲ್ಲಿ ಸಂಭೋದಿಸಿದ್ದಲ್ಲದೆ ಸುಳ್ಳು ಆರೋಪಗಳನ್ನು ಮಾಡಿ ಅವಹೇಳನ ಮಾಡಿದ್ದಾನೆ.

 

 

ನಟ ವಿಜಯ್ ರಂಗರಾಜು ಮಾಧ್ಯಮವೊಂದಕ್ಕೆ ನೀಡಿರುವ ಸಂರ್ದಶನದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. “ಮುತ್ತೈದೆ ಭಾಗ್ಯ ಚಿತ್ರದ ಶೂಟಿಂಗ್ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಅಲ್ಲಿ ನಾನು ಹೋದಾಗ ನನ್ನನ್ನು ಹೊರಗೆ ಕಳಿಸೋಕೆ ವಿಷ್ಣುವರ್ಧನ ಹೇಳಿದ್ರು. ಯಾಕೆ ಕಳಿಸ್ಬೇಕು ಅಂದಾಗ ಡಿಸ್ಟರ್ಬ್ ಆಗುತ್ತೆ ಅಂದಿದ್ದರು ವಿಷ್ಣು ವರ್ಧನ್ ಗೆ ಸ್ವಲ್ಪ ಲೇಡೀಸ್ ವೀಕ್‌ನೆಸ್ ಇತ್ತು” ಎಂದಿದ್ದಾನೆ ವಿಜಯ ರಂಗರಾಜು.

“ಕನ್ನಡ ಖೈದಿ ಸಿನಿಮಾ ಶೂಟ್ ಸಂದರ್ಭ ಫೈಟ್ ಸೀನ್ ಶೂಟ್ ಆಗ್ತಿತ್ತು. ಅಲ್ಲಿ ವಿಷ್ಣುವರ್ಧನ್ ನನ್ನ ಭುಜಕ್ಕೆ ಹೊಡೆಯಬೇಕಿತ್ತು, ಆದರೆ ವಿಷ್ಣುವರ್ಧನ್ ನನ್ನ ತಲೆಗೆ ಹೊಡೆದಿದ್ದರು. ಆ ಸಂದರ್ಭ ಕೋಪಗೊಂಡ ನಾನು ವಿಷ್ಣುವರ್ಧನ್ ಅವರ ಕಾಲರ್ ಪಟ್ಟಿ ಹಿಡಿದು ಹೊಡೆಯಲು ಹೋಗಿದ್ದೆ. ಆ ವೇಳೆ ಸೆಟ್ ನಲ್ಲಿ ಇದ್ದವರು ನನ್ನನ್ನು ಬಿಡಿಸಿದ್ದರು” ಎಂದು ಹೇಳಿದ್ದಾನೆ ವಿಜಯ್ ರಂಗರಾಜು.

ವಿಷ್ಣುದಾದಾ ಬಗ್ಗೆ ಈ ರೀತಿ ಕೀಳು ಮಟ್ಟದಲ್ಲಿ ಮಾತನಾಡಿರುವುದು ಸಹಜವಾಗಿ ಕನ್ನಡಾಭಿಮಾನಿಗಳು ಮತ್ತು ಸಾಹಸ ಸಿಂಹ ಅಭಿಮಾನಿಗಳನ್ನು ಕೆರಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ವಿಷ್ಣು ಅಭಿಮಾನಿಗಳು ನ್ಯಾಯಕ್ಕಾಗಿ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಈ ಘಟನೆಯ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದು, ನಟನ ವಿರುದ್ಧ ಕ್ರಮ ಜರುಗಿಸಿ ಎಂದು ಮನವಿ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top