fbpx
ಸಮಾಚಾರ

ತಾತನಾದ ಮುಖೇಶ್ ಅಂಬಾನಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಕುಟುಂಬಕ್ಕೆ ಹೊಸ ಕುಡಿ ಆಗಮನ

ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ ಅವರು ಅಜ್ಜ ಆಗಿದ್ದಾರೆ. ಮುಕೇಶ್‌ ಮತ್ತು ನೀತಾ ಅಂಬಾನಿಯವರ ಮಗ ಆಕಾಶ್‌ ಪತ್ನಿ ಶ್ಲೋಕಾ ಇಂದು ಇಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಅಂಬಾನಿ ಕುಟುಂಬದಿಂದ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಲಾಗಿದೆ.

“ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಸಂತಾನವಾಗಿದೆ. ನೀತಾ ಮತ್ತು ಮುಕೇಶ್ ಅಂಬಾನಿ ಅವರು ಮೊದಲ ಬಾರಿ ಅಜ್ಜ-ಅಜ್ಜಿಯಾದ ಬಗ್ಗೆ ಸಂತಸ ಪಟ್ಟಿದ್ದಾರೆ. ಧೀರೂಭಾಯ್ ಮತ್ತು ಕೋಕಿಲಾ ಅಂಬಾನಿ ಅವರ ಮರಿಮೊಮ್ಮಗನನ್ನು ತುಂಬು ಸಂತೋಷದಿಂದ ಸ್ವಾಗತಿಸಿದ್ದಾರೆ. ಮಗುವಿನ ಜನನದಿಂದ ಮೆಹತಾ ಮತ್ತು ಅಂಬಾನಿ ಕುಟುಂಬಗಳಿಗೆ ಸಂತಸ ತಂದಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಖ್ಯಾತ ಉದ್ಯಮಿ ರಸೆಲ್ ಮೆಹತಾ ಅವರ ಮಗಳಾದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ 2018ರ ಮಾರ್ಚ್ ತಿಂಗಳಲ್ಲಿ ಗೋವಾದಲ್ಲಿ ಇಬ್ಬರ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಮರು ವರ್ಷ, ಅಂದರೆ 2019ರ ಮಾರ್ಚ್ ತಿಂಗಳಲ್ಲಿ ವಿವಾಹ ಮಹೋತ್ಸವ ಜರುಗಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top