fbpx
ಸಮಾಚಾರ

ಕೆಜಿಎಫ್ ನಿರ್ದೇಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ‘ಸಲಾರ್’ನಲ್ಲಿ ನಟಿಸಲು ನಿಮಗಿದೋ ಸುವರ್ಣಾವಕಾಶ

ಕೆಜಿಎಫ್ ನಿರ್ದೇಕ ಪ್ರಶಾಂತ್‌ ನೀಲ್‌ ನಿರ್ದೇಶಿಸುತ್ತಿರುವ ಬಹುಭಾಷಾ ಚಿತ್ರ “ಸಲಾರ್‌’ನ ಪೂರ್ವಭಾವಿ ತಯಾರಿ ಜೋರಾಗಿ ನಡೆಯುತ್ತಿದೆ. ಮೊದಲ ಹಂತವಾಗಿ ಚಿತ್ರತಂಡ ಕಲಾವಿದರ ಆಯ್ಕೆಗೆ ಆಡಿಷನ್‌ ಕರೆದಿದ್ದು ನಿಮಗೆ ನಟನೆಯಲ್ಲಿ ಆಸಕ್ತಿ ಇದ್ದರೇ ನಿಮಗಿದು ಸುವರ್ಣಾವಕಾಶವಾಗಿದೆ.

ಎಲ್ಲ ವಿಭಾಗದಲ್ಲೂ ಕಲಾವಿದರ ಆಯ್ಕೆಗೆ ಆಡಿಷನ್​ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಒಂದು ನಿಮಿಷದ ವಿಡಿಯೋ ಆ್ಯಕ್ಟ್​ ಅನ್ನು ಮಾಡಬೇಕು. ಇದು ಯಾವ ಭಾಷೆಯಲ್ಲಿದ್ದರೂ ಪರವಾಗಿಲ್ಲ ಎಂದು ಚಿತ್ರತಂಡ ಹಂಚಿಕೊಂಡಿರುವ ಪ್ರಕಟಣೆಯಲ್ಲಿದೆ.

 

 

ಮೊದಲಿಗೆ ಆಡಿಷನ್​ ಅನ್ನು ಹೈದರಾಬಾದಿನಲ್ಲಿ ನಡೆಸಲು ನಿರ್ಧರಿಸಿದ್ದು, ಇದೇ ತಿಂಗಳ ಅಂದರೆ ಡಿ.15ರಂದು, ಹೈದರಾಬಾದಿನ ಸೆರಿಲಿಂಗಂಪಲ್ಲೆಯಲ್ಲಿರುವ ಅಲುಮಿನಿಯಂ ಫ್ಯಾಕ್ಟರಿಯಲ್ಲಿ ನಡೆಸಲಾಗುತ್ತಿದೆ. ಬೆಳಿಗ್ಗೆ 9 ರಿಂದ ಆರಂಭವಾಗುವ ಆಡಿಷನ್​ ಸಂಜೆ 6ರವರೆಗೆ ನಡೆಯಲಿದೆ. ಈ ಆಡಿಷನ್​ ಬೆಂಗಳೂರು ಹಾಗೂ ಚೆನ್ನೈನಲ್ಲೂ ನಡೆಯಲಿದೆ. ಅದರ ದಿನಾಂಕವನ್ನು ಶೀಘ್ರದಲ್ಲೇ ನೀಡುವುದಾಗಿ ಹೊಂಬಾಳೆ ಫಿಲಂಸ್​ ಪ್ರಕಟಣೆಯಲ್ಲಿ ತಿಳಿಸಿದೆ.

ಬಾಹುಬಲಿಯಾಗಿ ನಟಿಸಿದ ಪ್ರಭಾಸ್, ಕೆಜಿಎಫ್‌ನಂಥ ಚಿತ್ರ ನಿರ್ದೇಶಿಸಿದ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ನಿರೀಕ್ಷೆ ಇದೆ. ಈ ಜೋಡಿ ಕಮಾಲ್ ಮಾಡಲಿರುವ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕವರೂ ಬಣ್ಣದ ಲೋಕದಲ್ಲಿ ಮಿಂಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನಟನೆಯಲ್ಲಿ ಆಸಕ್ತಿ ಇರೋರು ಟ್ರೈ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top