fbpx
ಸಮಾಚಾರ

ಬಡವರಿಗೆ ನೆರವು ನೀಡಲು ಕೋಟಿಗಟ್ಟಲೆ ಸಾಲ: ಆಸ್ತಿ ಅಡವಿಟ್ಟ ‘ರಿಯಲ್ ಹೀರೋ’ ಸೋನು ಸೂದ್

ಬಾಲಿವುಡ್​​ ನಟ ಸೋನು ಸೂದ್​ ಈ ವರ್ಷ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಕಷ್ಟು ನೆರವು ನೀಡಿದ್ದಾರೆ. ಬಡವರಿಗೆ ನೆರವು ನೀಡಲು ಅವರು ಮುಂಬೈನಲ್ಲಿರುವ ತಮ್ಮ 2 ಶಾಪ್ ಸೇರಿದಂತೆ 6 ಫ್ಲಾಟ್​ಗಳನ್ನು ಅಡವಿಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಮುಂಬೈನ ವಿವಿಧ ಪ್ರದೇಶಗಳಲ್ಲಿರುವ 8 ಆಸ್ತಿಗಳನ್ನು ಸೋನು ಸೂದ್ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ. ಅವಶ್ಯವಿದ್ದಿದ್ದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಸಾಲ ಪಡೆಯಲು ಜುಹು ಪ್ರದೇಶದಲ್ಲಿನ ಆಸ್ತಿಗಳನ್ನು ಅಡವಿಟ್ಟಿದ್ದು, 2 ಅಂಗಡಿ ಹಾಗೂ 6 ಫ್ಲ್ಯಾಟ್‍ಗಳನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸೆಪ್ಟೆಂಬರ್ 15ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ನವೆಂಬರ್ 24ರಂದು ರಿಜಿಸ್ಟರ್ ಆಗಿದೆ. ಈ ದಾಖಲೆಯನ್ನಾಧರಿಸಿ ವರದಿ ಮಾಡಲಾಗಿದ್ದು, ಇಸ್ಕಾನ್ ದೇವಸ್ಥಾನದ ಬಳಿ ಎ.ಬಿ.ನಾಯರ್ ರಸ್ತೆಯಲ್ಲಿರುವ ಕಟ್ಟಡವನ್ನು ಸಹ ಅಡಮಾನ ಇಡಲಾಗಿದೆ. ಸಾಲ ಪಡೆಯಲು 5 ಲಕ್ಷ ರೂ.ಗಳ ನೋಂದಣಿ ಮೊತ್ತವನ್ನು ಸಹ ಪಾವತಿಸಲಾಗಿದೆ. ಈ ಆಸ್ತಿಗಳು ಸೋನು ಸೂದ್ ಮತ್ತು ಅವರ ಪತ್ನಿ ಒಡೆತನದಲ್ಲಿದೆಯಂತೆ.

ಸಾಲ ತೀರಿಸುವ ಬಗೆ ಹೇಗೆ?
‘ಈ ಆಸ್ತಿಗಳು ಸೋನು ಸೂದ್ ಹಾಗೂ ಅವರ ಪತ್ನಿಯ ಹೆಸರಿನಲ್ಲಿಯೇ ಇರುತ್ತದೆ. ತಿಂಗಳು ಬಾಡಿಗೆಯನ್ನು ಕೂಡ ಪಡೆಯಬಹುದು. ಆದರೆ 10 ಕೋಟಿ ರೂಪಾಯಿ ಸಾಲಕ್ಕೆ ಬಡ್ಡಿ ನೀಡಬೇಕಾಗುತ್ತದೆ’ ಎಂದು ವರದಿ ತಿಳಿಸಿವೆ. ಲಾಕ್‌ಡೌನ್ ಸಮಯದಲ್ಲಿ ಅನೇಕ ವಲಸೆ ಕಾರ್ಮಿಕರಿಗೆ ಅವರ ಊರಿಗೆ ತೆರಳಲು ಸೋನು ಬಸ್, ರೈಲು ವ್ಯವಸ್ಥೆ ಮಾಡಿದ್ದರು. ರೈತರೊಬ್ಬರಿಗೆ ಹೊಲದಲ್ಲಿ ಊಳಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top