fbpx
ಸಮಾಚಾರ

“ವಿಷ್ಣುವರ್ಧನ್‌ರ ಕಾಲರ್‌ ಹಿಡಿಯೋ ತಾಕತ್‌ ಯಾರಿಗಿದೆ? ಕರ್ನಾಟಕಕ್ಕೆ ಬಂದ್ರೆ ನಿಮ್ಮನ್ನ ಸುಮ್ಮೆಬಿಡಲ್ಲ” ತೆಲುಗು ನಟನ ವಿರುದ್ಧ ಅನಿರುದ್ಧ ಅಸಮಾಧಾನ

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತೆಲುಗು ಹಿರಿಯ ನಟ ವಿಜಯ ರಂಗರಾಜು ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ವಿಷ್ಣುದಾದಾ ಅಗೌರವವಾಗಿ ಮಾತನಾಡಿರುವ ನಟನನ್ನು ವಿಷ್ಣು ಅಳಿಯ ನಟ ಅನಿರುದ್ ತರಾಟೆಗೆ ತೆಗೆದುಕೊಂಡಿದ್ದಾರೆ.

“ರಾಜ್ಯದ ಒಬ್ಬ ಮೇರು ನಟರ ಬಗ್ಗೆ ಮಾತನಾಡ್ತಿದ್ದಾರೆ. ಅವರ ಬಗ್ಗೆ ಇವತ್ತು ಕೆಟ್ಟದಾಗಿ ಮಾತನಾಡಿದ್ರೆ ಕನ್ನಡಿಗರಿಗೆ ಅವಮಾನ ಮಾಡಿದ ಹಾಗೆ. ಅಪ್ಪಾವ್ರ ಅಭಿಮಾನಿಗಳು ಸಿಂಹಗಳು. ದಯವಿಟ್ಟು ಅವರು ಕ್ಷಮೆ ಕೇಳಬೇಕು ಅಂತ ಕೇಳಿಕೊಳ್ಳುತ್ತೇನೆ. ಅಪ್ಪಾವ್ರಿಗೆ ಬೇರೆ ಬೇರೆ ರಾಜ್ಯ, ಭಾಷೆ ಅಂತ ಯಾವತ್ತು ಬೇಧ ಭಾವ ಮಾಡಲಿಲ್ಲ. ಎಲ್ಲರನ್ನೂ ನಮ್ಮವರು ಎಂದು ಭಾವಿಸಿದವರು. ಆದರೆ ಇವತ್ತು ಈ ರೀತಿ ಮಾತನಾಡಿರೋದು ಬಹಳ ಬೇಸರವಾಗಿದೆ” ಎಂದು ಹೇಳಿದ್ದಾರೆ.

“ಅಪ್ಪಾವ್ರ ಬಗ್ಗೆ ವಿಜಯ್ ರಂಗರಾಜು ಅವರು ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ನಿಜಕ್ಕೂ ತುಂಬಾ ಬೇಸರದ ವಿಷಯ. ಇದರಿಂದ ನಮ್ಮ ಎಲ್ಲಾ ಅಭಿಮಾನಿಗಳಿಗೆ ದುಃಖ ಆಗಿದೆ. ಎಲ್ಲರಿಗೂ ಗೊತ್ತಿರುವಂತೆ ಅಪ್ಪಾವ್ರು ಎಲ್ಲಾ ಕಲಾವಿದರಿಗೆ ತಂತ್ರಜ್ಞರಿಗೆ ಪ್ರತಿಯೊಬ್ಬರಿಗೂ ಗೌರವ ಕೊಟ್ಟು ನಡೆದು ಕೊಳ್ತಾ ಇದ್ರು. ಅಷ್ಟೆ ಅಲ್ಲ ಕಷ್ಟದಲ್ಲಿದ್ದ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಸಹಾಯ ಮಾಡುವ ಸಮಯದಲ್ಲೂ ನಾನು ಸಹಾಯ ಮಾಡ್ದೆ ಅಂತ ಎಲ್ಲಿಯೂ ಹೇಳ್ಬೇಡಿ ಅಂತ ಹೇಳ್ತಾ ಇದ್ರು. ಅಂತವರ ಬಗ್ಗೆ ಇವತ್ತು ಈ ವ್ಯಕ್ತಿ ಹೀಗೆ ಮಾತನಾಡಿದ್ದು, ನಿಜಕ್ಕೂ ಬೇಸರದ ವಿಷಯ” ಎಂದಿದ್ದಾರೆ.

ಸಿಂಹದ ಕಾಲರ್ ಹಿಡಿಯೋಕೆ ಸಾಧ್ಯನಾ?
‘ವಿಜಯ್ ಅವರು ವಿಷ್ಣು ಅವರ ಕಾಲರ್ ಹಿಡಿದರು ಅಂತ ಹೇಳ್ತಾರೆ. ಸಿಂಹದ ಕಾಲರ್ ಹಿಡಿಯೋಕೆ ಯಾರಿಂದ ಸಾಧ್ಯ? ಅಷ್ಟು ಧೈರ್ಯ ಇದ್ದಿದ್ದರೆ ಈ ವಿಷಯವನ್ನು ವಿಜಯ್ ಅವರು ಆಗಲೇ ಹೇಳಬಹುದಿತ್ತು. ಆಗ ಯಾಕೆ ಹೇಳಲಿಲ್ಲ? ಅಪ್ಪಾಜಿ ಇಹಲೋಕ ತ್ಯಜಿಸಿ 11 ವರ್ಷಗಳು ಆದಮೇಲೆ ವಿಜಯ್ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಸತ್ಯಾಂಶ, ನಿಜಾಂಶಕ್ಕೆ ಧೈರ್ಯ ಇರತ್ತೆ. ಸುಮ್ಮನೆ ಮೀಸೆ ಬೆಳೆಸಿಕೊಂಡರೆ ಶಕ್ತಿಶಾಲಿ ಅಂತಲ್ಲ. ಕರ್ನಾಟಕದ ಮೇರುನಟರ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಇಡೀ ಕರ್ನಾಟಕದ ಜನರಿಗೆ ಅವಮಾನ ಮಾಡಿದಂತೆ. ದಯವಿಟ್ಟು ಅವರು ಕ್ಷಮೆ ಕೇಳಬೇಕು ಅಂತ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ’ ಎಂದು ಅನಿರುದ್ಧ ಹೇಳಿದ್ದಾರೆ.

“ನೀವಿಲ್ಲಿ ದಯವಿಟ್ಟು ಬರ್ಬೇಡಿ. ನೀವಿಲ್ಲಿ ಬಂದರೆ ಅಪ್ಪಾವ್ರ ಅಭಿಮಾನಿಗಳು ನಿಮ್ಮನ್ನು ಏನ್ ಮಾಡ್ತಾರೋ ನನಗೆ ಗೊತ್ತಿಲ್ಲ. ಯಾವತ್ತೂ ಇಲ್ಲದಿರುವ ವ್ಯಕ್ತಿಯ ಬಗ್ಗೆ ಮಾತನಾಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡ್ಬೇಕು. ಏನ್ ಮಾತ್ಡಾತಿದ್ದೀವಿ ಅನ್ನೋ ಪರಿಜ್ಞಾನ ಇರಬೇಕು. ತೆಲುಗು ಚಿತ್ರರಂಗವನ್ನು ಕೇಳ್ಕೋತೀನಿ ಆ ವ್ಯಕ್ತಿ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

“ಮತ್ತೊಮ್ಮೆ ನಾನು ತೆಲುಗು ಇಂಡಸ್ಟ್ರಿಯವರನ್ನ ಕೇಳ್ಕೋತೀನಿ ಆ ವ್ಯಕ್ತಿ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು. ನಾವೆಲ್ಲ ಭಾರತೀಯರು, ಒಂದೇ ಕುಟುಂಬದವರು. ಆದರೆ ಕೆಟ್ಟವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. “ಅಭಿಮಾನಿಗಳೇ, ಯಾರೋ ಏನೋ ಮಾತನಾಡಿದ್ರೂ ಅಂತ ಬೇಜಾರಗ್ದೇಡಿ, ಆ ವ್ಯಕ್ತಿ ಯಾರು ಅಂತಾನೆ ಗೊತ್ತಿಲ್ಲ, ಆದ್ರೆ ಅಪ್ಪಾವ್ರ ಬಗ್ಗೆ ಮಾತನಾಡಿದ ಮೇಲೆ ಆ ವ್ಯಕ್ತಿ ಯಾರು ಅಂತ ತಿಳೀತು. ಸಾಮಾಜಿಕ ಜಾಲತಾಣದಲ್ಲಿ ಆ ವ್ಯಕ್ತಿಗೆ ಅಪ್ಪಾವ್ರ ಅಭಿಮಾನಿಗಳು ಚಪ್ಪಲಿಯ ಹಾರ ಹಾಕ್ತಾ ಇದ್ದಾರೆ. ಆ ವ್ಯಕ್ತಿಯ ಮಾತಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಅಪ್ಪಾವ್ರು ಏನು ಎಂದು ಎಲ್ಲರಿಗೂ ಗೊತ್ತಿದೆ. ಅವರ ಸ್ಥಾನ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ ಎಂದ ಅನುರುಧ್‌, ಎಲ್ಲ ಅಭಿಮಾನಿಗಳಿಗೆ ಕೋಟಿ ಕೋಟಿ ಧನ್ಯವಾದಗಳು!” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top