fbpx
ಸಮಾಚಾರ

“ಹೆಣ್ಣಿನ ವೀಕ್ನೆಸ್ ಇದ್ದಿದ್ದರೆ ಮೂರ್ನಾಲ್ಕು ಮದುವೆಯಾಗುತ್ತಿದ್ದರು” ವಿಷ್ಣುವರ್ಧನ್ ಬಗ್ಗೆ ಕೀಳು ಮಾತನಾಡಿದ ನಟನಿಗೆ ಪ್ರಥಮ್ ಪಂಚ್

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತೆಲುಗು ಹಿರಿಯ ನಟ ವಿಜಯ ರಂಗರಾಜು ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ವಿಷ್ಣುದಾದಾ ಅಗೌರವವಾಗಿ ಮಾತನಾಡಿರುವ ನಟನನ್ನು ಬಿಗ್ ಬಾಸ್ ಸ್ಪರ್ಧಿ, ನಟ ಪ್ರಥಮ್ ಖಂಡಿಸಿದ್ದು, ‘ಆ ನಟನ ಜನ್ಮಕ್ಕೆ ನಾಚಿಕೆ ಆಗ್ಬೇಕು’ ಎಂದು ಗುಡುಗಿದ್ದಾರೆ.

”ಅಮರವಾಗಿರೋ ಮರೆಯದಮಾಣಿಕ್ಯ ವಿಷ್ಣುಸರ್ ಬಗ್ಗೆ ಕೆಟ್ಟದಾಗಿ ಮಾತಾಡೋದು ಬದುಕಿರೋ ನಿಮ್ಮಪ್ಪ-ಅಮ್ಮ, ಹೆಂಡತಿ ಬಗ್ಗೆ ಅಸಹ್ಯವಾಗಿ ಮಾತನಾಡಿದಂತೆ! ದಾದಾರಿಗೆ ಹೆಣ್ಣಿನ ವೀಕ್‌ನೆಸ್ ಇದ್ದಿದ್ರೆ 3,4 ಮದುವೆ ಆಗಿರ್ತಿದ್ರು. ಮೇರುನಟರ ಬಗ್ಗೆ ಅಸಭ್ಯವಾಗಿ ಮಾತಾಡೋ ಮೂಲಕ ನಿಮ್ಮೊಬ್ಬರಿಗೆ ಅಲ್ಲ, ತಮಿಳುನಾಡಿಗೆ ಸೂತಕ ಮಾಡಿದ್ರಿ! ನಾಚಿಕೆಆಗ್ಬೇಕು ನಿಮ್ ಜನ್ಮಕ್ಕೆ..” ಎಂದು ಬಿಗ್ ಬಾಸ್ ಪ್ರಥಮ್ ಅವರು ತೆಲುಗು ನಟನ ಹೇಳಿಕೆಯನ್ನು ಖಂಡಿಸಿದ್ದಾರೆ.

‘ಸಂಸ್ಕಾರದ ಕೊರತೆಯಿಂದ ಬಳಲುತ್ತಿರೋ ಅನಾಗರಿಕ ತೆಲುಗು ನಟನಿಂದ ಇನ್ನೇನು ನಿರೀಕ್ಷೆ ಮಾಡೋಕೆ ಸಾಧ್ಯ ಹೇಳಿ? 2009ರಲ್ಲಿ ಮೈಸೂರಿನ ರಸ್ತೆ ಬಳಿ ವಿಷ್ಣು ಸರ್ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವಾಗ ನನ್ನ ಕೆನ್ನೆ ಸವರಿದ್ರು. ಪುಣ್ಯಾತ್ಮರು ಕೆನ್ನೆ ಸವರಿದ್ರು ಅನ್ನೋ ಒಂದೇ ಕಾರಣಕ್ಕೆ ಎರಡು ದಿನ ಮುಖ ತೊಳೆದಿರಲಿಲ್ಲ ನಾನು. ಅವ್ರ ಸ್ಪರ್ಶ ನನ್ನ ಕೆನ್ನೆಯ ಮೇಲಿತ್ತು ಅಂತ. ಅಂತವರ ಬಗ್ಗೆ ಮಾತಾಡಿದ್ರೆ ನಿಜಕ್ಕೂ ನೋವಾಗುತ್ತದೆ’ ಎಂದು ಒಳ್ಳೆ ಹುಡುಗ ಪ್ರಥಮ್ ಬೇಸರ ವ್ಯಕ್ತಪಡಿಸಿದ್ದಾರೆ.

ಗಂಜರಾಜು ಹೇಳಿದ್ದೇನು?
ನಟ ವಿಜಯ್ ರಂಗರಾಜು ಮಾಧ್ಯಮವೊಂದಕ್ಕೆ ನೀಡಿರುವ ಸಂರ್ದಶನದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. “ಮುತ್ತೈದೆ ಭಾಗ್ಯ ಚಿತ್ರದ ಶೂಟಿಂಗ್ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಅಲ್ಲಿ ನಾನು ಹೋದಾಗ ನನ್ನನ್ನು ಹೊರಗೆ ಕಳಿಸೋಕೆ ವಿಷ್ಣುವರ್ಧನ ಹೇಳಿದ್ರು. ಯಾಕೆ ಕಳಿಸ್ಬೇಕು ಅಂದಾಗ ಡಿಸ್ಟರ್ಬ್ ಆಗುತ್ತೆ ಅಂದಿದ್ದರು ವಿಷ್ಣು ವರ್ಧನ್ ಗೆ ಸ್ವಲ್ಪ ಲೇಡೀಸ್ ವೀಕ್‌ನೆಸ್ ಇತ್ತು” ಎಂದಿದ್ದಾನೆ ವಿಜಯ ರಂಗರಾಜು.

“ಕನ್ನಡ ಖೈದಿ ಸಿನಿಮಾ ಶೂಟ್ ಸಂದರ್ಭ ಫೈಟ್ ಸೀನ್ ಶೂಟ್ ಆಗ್ತಿತ್ತು. ಅಲ್ಲಿ ವಿಷ್ಣುವರ್ಧನ್ ನನ್ನ ಭುಜಕ್ಕೆ ಹೊಡೆಯಬೇಕಿತ್ತು, ಆದರೆ ವಿಷ್ಣುವರ್ಧನ್ ನನ್ನ ತಲೆಗೆ ಹೊಡೆದಿದ್ದರು. ಆ ಸಂದರ್ಭ ಕೋಪಗೊಂಡ ನಾನು ವಿಷ್ಣುವರ್ಧನ್ ಅವರ ಕಾಲರ್ ಪಟ್ಟಿ ಹಿಡಿದು ಹೊಡೆಯಲು ಹೋಗಿದ್ದೆ. ಆ ವೇಳೆ ಸೆಟ್ ನಲ್ಲಿ ಇದ್ದವರು ನನ್ನನ್ನು ಬಿಡಿಸಿದ್ದರು” ಎಂದು ಹೇಳಿದ್ದಾನೆ ವಿಜಯ್ ರಂಗರಾಜು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top