fbpx
ಸಮಾಚಾರ

ಸರ್ಕಾರದ ವಿರುದ್ಧ ಹಿರಿಯ ನಟಿ ಲೀಲಾವತಿ ಆಕ್ರೋಶ

ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಹಿರಿಯ ನಟಿ ಡಾ. ಲೀಲಾವತಿ ಬೆಂಬಲ ಸೂಚಿಸಿದ್ದು, ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಮಾತನಾಡಿ, “ರೈತರು ಕೆಸರಲ್ಲಿ ಎತ್ತುಗಳ ತರ ಉರುಳಾಡಿ, ಹೊರಳಾಡಿ ಕಷ್ಟಪಡುತ್ತಾನೆ. ಅವನ ಮನಸು ನೊಂದರೆ ಎಲ್ಲರಿಗೂ ಕಷ್ಟವಾಗುತ್ತದೆ. ನಿಮ್ಮ ಒಗ್ಗಟ್ಟಿನಿಂದ ರೈತರಿಗೆ ಒಳ್ಳೆಯದು ಮಾಡಿ.. ರೈತ ವಿರೋಧಿಯಾದ ಮೂರು ಕಾಯ್ದೆಗಳನ್ನು ಸರ್ಕಾರ ದಯವಿಟ್ಟು ವಾಪಸ್​ ಪಡೆಯಲಿ” ಎಂದಿದ್ದಾರೆ.

“ನನಗೆ ಸಿನಿಮಾಕ್ಕಿಂತ ಕೃಷಿ ಕೆಲಸವೇ ಹಿತ ಎನ್ನಿಸಿದೆ. ನಮ್ಮನ್ನು ಬಣ್ಣ ಕೈಬಿಟ್ಟರೂ ಮಣ್ಣು ಕೈಬಿಡಲಿಲ್ಲ. ಓರ್ವ ರೈತಳಾಗಿ ನಾನು ರೈತರ ಹೋರಾಟವನ್ನು ಬೆಂಬಲಿಸುತ್ತೇನೆ. ಎಲ್ಲರೂ ರೈತರ ಪರ ನಿಲ್ಲಬೇಕು. ಪ್ರತಿಭಟನೆಯನ್ನು ಬೆಂಬಲಿಸಬೇಕು” ಎಂದು ಸರ್ಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top