fbpx
ಸಮಾಚಾರ

ವಿಷ್ಣು ಬಗ್ಗೆ ಕೇಳು ಹೇಳಿಕೆ ನೀಡಿದ ನಟನ ವಿರುದ್ದ ಸಿಡಿದೆದ್ದ ವಿಷ್ಣು ಸೇನೆ: ಕಾನೂನು ಹೋರಾಟಕ್ಕೆ ಸಜ್ಜು

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತೆಲುಗು ಹಿರಿಯ ನಟ ವಿಜಯ ರಂಗರಾಜು ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ವಿಷ್ಣುದಾದಾ ಅಗೌರವವಾಗಿ ಮಾತನಾಡಿರುವ ನಟನಿಗೆ ತಕ್ಕ ಪಾಠ ಕಲಿಸಲು ವಿಷ್ಣು ಸೇನೆ ನಿರ್ಧಾರ ಮಾಡಿದ್ದು ಕಾನೂನು ಹೋರಾಟಕ್ಕೆ ಮುಂದಾಗಿದೆ.

 

 

ಸರಣಿ ದೂರು ದಾಖಲಿಸಲು ಕರೆ:
ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿರುವ ನಟನ ವಿರುದ್ಧ ವಿಷ್ಣು ಸೇನೆ ಸಮತಿ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದು, ಸರಣಿ ದೂರುಗಳನ್ನು ದಾಖಲಿಸಲು ಕರೆ ನೀಡಿದೆ. ನಿಮ್ಮ ನಿಮ್ಮ ಏರಿಯಾದ ಪೊಲೀಸ್ ಠಾಣೆಯಲ್ಲಿ ತೆಲುಗು ನಟನ ವಿರುದ್ಧ ದಾಖಲಿಸಿ ಎಂದು ವಿಷ್ಣು ಸೇನೆ ಮನವಿ ಮಾಡಿದೆ.

 

#ದೇವರಂತಹ_ಯಜಮಾನ್ರ ಮೇಲೆ ಆರೋಪ ಮಾಡಿದ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದು ತಪ್ಪೇನಲ್ಲ. ಆದ್ದರಿಂದ ನಿಮ್ಮ ನಿಮ್ಮ ಏರಿಯಾದ ಪೊಲೀಸ್…

ವೀರಕಪುತ್ರ ಶ್ರೀನಿವಾಸ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಡಿಸೆಂಬರ್ 11, 2020

 

ಕಾನೂನು ಹೋರಾಟ :
“#ದೇವರಂತಹ_ಯಜಮಾನ್ರ ಮೇಲೆ ಆರೋಪ ಮಾಡಿದ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದು ತಪ್ಪೇನಲ್ಲ. ಆದ್ದರಿಂದ ನಿಮ್ಮ ನಿಮ್ಮ ಏರಿಯಾದ ಪೊಲೀಸ್ ಸ್ಟೇಶನ್ಗಳಿಗೆ ಹೋಗಿ ಆತನ ವಿರುದ್ಧ ಒಂದು ದೂರು ಕೊಡಿ. ನಿಮ್ಮದು ಯಾವುದೇ ಸಂಘವಾಗಿದ್ದರೂ ಅಥವಾ ಸಂಘ ಇಲ್ಲದಿದ್ದರೂ ದೂರು ಕೊಡಲು ಅಡ್ಡಿಯೇನಿಲ್ಲ. ” ಎಂದು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.

“ನಾನು ಮತ್ತು ವಕೀಲರು ಅದಕ್ಕೆ ಬೇಕಾದ ಡ್ರಾಫ್ಟ್ ರೆಡಿ ಮಾಡುತ್ತಿದ್ದೇವೆ. ಅದನ್ನು ನಿಮ್ಮೊಂದಿಗೆ ಮಧ್ಯಾಹ್ನದೊಳಗೆ ಹಂಚಿಕೊಳ್ಳುವೆ. ಆ ಡ್ರಾಫ್ಟ್ ನೋಡಿದ ಮೇಲೆ ದೂರು ಯಾವತರ ದಾಖಲಿಸಬೇಕು ಎಂಬುದೊಂದು ಐಡಿಯಾ ನಿಮಗೆ ಬರಬಹುದು. ಅಥವಾ ಡ್ರಾಫ್ಟ್ ಇಲ್ಲದೆಯೂ ದೂರು ದಾಖಲಿಸುವ ಕ್ರಮ ನಿಮಗೇ ಗೊತ್ತಿರಬಹುದು. ಆದ್ದರಿಂದಎಷ್ಟು ಸಾಧ್ಯವೋ ಅಷ್ಟು ದೂರು ದಾಖಲಿಸೋಣ! ದೂರು ದಾಖಲಾದ ಮೇಲೆ ಅದರ ಒಂದೊಂದು ಪ್ರತಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಳಿಸುವುದು ಮರೆಯಬೇಡಿ. ” ಎಂದು ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top