fbpx
ಸಮಾಚಾರ

“ದಾದಾ ಬಗ್ಗೆ ಕೀಳು ಮಾತನಾಡಿರುವ ಆತ ಯಾರೇ ಆಗಿದ್ದರೂ ಕೂಡಲೇ ಕ್ಷಮೆ ಕೇಳಬೇಕು” ಗೋಲ್ಡನ್ ಸ್ಟಾರ್ ಗಣೇಶ್ ಆಗ್ರಹ

ಸಾಹಸಸಿಂಹ ವಿಷ್ಣುವರ್ಧನ್ ಕುರಿತಂತೆ ತೆಲುಗು ನಟ ವಿಜಯ್ ರಂಗರಾಜು ವಿವಾದಾತ್ಮಕ ಹೇಳಿಕೆ ಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿದೆ. ರಂಗಬಾಬು ವಿರುದ್ಧ ಕ್ರಮಕೈಗೊಳ್ಳುವಂತೆ ಕನ್ನಡ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ವಿಜಯ್ ರಂಗರಾಜು ವಿರುದ್ಧ ನಟ ಕಿಚ್ಚ ಸುದೀಪ್, ಜಗ್ಗೇಶ್, ಪುನೀತ್ ರಾಜಕುಮಾರ್, ಅನಿರುದ್ಧ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಪ್ರತಿಕ್ರಿಯೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಗಣೇಶ್ ಅವರು ವಿಜಯ ರಂಗರಾಜು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಗಣೇಶ್ ಅವರ ಫೇಸ್ಬುಕ್ ಪೋಸ್ಟ್ ಈ ಕೆಳಗಿನಂತಿದೆ.

 

 

“ಸಂದರ್ಶನವೊಂದರಲ್ಲಿ ಕಲಾವಿದರೊಬ್ಬರು ಕನ್ನಡದ ಮೇರುನಟರಲ್ಲೊಬ್ಬರಾದ ನಮ್ಮ ವಿಷ್ಣು ದಾದಾರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಿರುವುದು ಅತ್ಯಂತ ಅಕ್ಷಮ್ಯ ಹಾಗು ನಾನದನ್ನು ಖಂಡಿಸುತ್ತೇನೆ.. ಕಲೆ ಮತ್ತು ಕಲಾವಿದನಿಗೆ ಗಡಿ ರೇಖೆಗಳಿಲ್ಲ.. ಯಾವುದೇ ಸಿನಿಮಾ ರಂಗಕ್ಕೆ ಸಂಬಂಧಿಸಿದ ಕಲಾವಿದರಾದರೂ ಮತ್ತೊಂದು ಸಿನಿಮಾ ರಂಗದ ಕಲಾವಿದರೊಡನೆ ಪರಸ್ಪರ ಅಭಿಮಾನ ಗೌರವಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಚಿತ್ರೋದ್ಯಮಗಳ ನಡುವೆ ಸೌಹಾರ್ದತೆಯನ್ನು ಕಾಪಾಡಬೇಕಾಗಿರುವುದು ಆತನ ಕರ್ತವ್ಯ.. ವಿಷ್ಣು ದಾದಾ ಸೇರಿದಂತೆ ನಮ್ಮ ಅನೇಕ ಹಿರಿಯರು ಈ ನೀತಿಯನ್ನು ಹಿಂದಿನಿಂದಲೂ ಪಾಲಿಸಿಕೊಂಡೇ ಬಂದಿದ್ದಾರೆ.. ವಿಷ್ಣು ದಾದಾರಂತಹ ಮೇರು ನಟರ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿರುವುದು, ದಾದಾರ ನಟನೆ ಹಾಗು ವ್ಯಕ್ತಿತ್ವವನ್ನು ಅಭಿಮಾನಿಸಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಯ ಮನಸ್ಸಿಗೂ ಘಾಸಿಯುಂಟುಮಾಡಿದೆ..”

“ದಾದಾರ ಬಗ್ಗೆ ಈ ರೀತಿಯ ಕೀಳು ಮಟ್ಟದ ಹೇಳಿಕೆಯನ್ನು ಕೊಟ್ಟ ಆತ ಯಾವುದೇ ಚಿತ್ರರಂಗಕ್ಕೆ ಸಂಬಂಧಪಟ್ಟವನಾಗಿದ್ದರೂ, ತನ್ನ ದುರಹಂಕಾರವನ್ನು ಪಕ್ಕಕ್ಕಿಟ್ಟು, ತಕ್ಷಣವೇ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ, ವಿಷ್ಣು ದಾದಾರ ಅಸಂಖ್ಯ ಅಭಿಮಾನಿಗಳಲ್ಲಿ ಈ ಕೂಡಲೇ ಕ್ಷಮೆ ಯಾಚಿಸಬೇಕೆಂದು ನಾನೂ ಒಬ್ಬ ಅಭಿಮಾನಿಯಾಗಿ ಆಗ್ರಹಿಸುತ್ತೇನೆ.. ಜೈ ವಿಷ್ಣುದಾದ”

ಗಂಜರಾಜು ಹೇಳಿದ್ದೇನು?
ನಟ ವಿಜಯ್ ರಂಗರಾಜು ಮಾಧ್ಯಮವೊಂದಕ್ಕೆ ನೀಡಿರುವ ಸಂರ್ದಶನದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. “ಮುತ್ತೈದೆ ಭಾಗ್ಯ ಚಿತ್ರದ ಶೂಟಿಂಗ್ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಅಲ್ಲಿ ನಾನು ಹೋದಾಗ ನನ್ನನ್ನು ಹೊರಗೆ ಕಳಿಸೋಕೆ ವಿಷ್ಣುವರ್ಧನ ಹೇಳಿದ್ರು. ಯಾಕೆ ಕಳಿಸ್ಬೇಕು ಅಂದಾಗ ಡಿಸ್ಟರ್ಬ್ ಆಗುತ್ತೆ ಅಂದಿದ್ದರು ವಿಷ್ಣು ವರ್ಧನ್ ಗೆ ಸ್ವಲ್ಪ ಲೇಡೀಸ್ ವೀಕ್‌ನೆಸ್ ಇತ್ತು” ಎಂದಿದ್ದಾನೆ ವಿಜಯ ರಂಗರಾಜು.

“ಕನ್ನಡ ಖೈದಿ ಸಿನಿಮಾ ಶೂಟ್ ಸಂದರ್ಭ ಫೈಟ್ ಸೀನ್ ಶೂಟ್ ಆಗ್ತಿತ್ತು. ಅಲ್ಲಿ ವಿಷ್ಣುವರ್ಧನ್ ನನ್ನ ಭುಜಕ್ಕೆ ಹೊಡೆಯಬೇಕಿತ್ತು, ಆದರೆ ವಿಷ್ಣುವರ್ಧನ್ ನನ್ನ ತಲೆಗೆ ಹೊಡೆದಿದ್ದರು. ಆ ಸಂದರ್ಭ ಕೋಪಗೊಂಡ ನಾನು ವಿಷ್ಣುವರ್ಧನ್ ಅವರ ಕಾಲರ್ ಪಟ್ಟಿ ಹಿಡಿದು ಹೊಡೆಯಲು ಹೋಗಿದ್ದೆ. ಆ ವೇಳೆ ಸೆಟ್ ನಲ್ಲಿ ಇದ್ದವರು ನನ್ನನ್ನು ಬಿಡಿಸಿದ್ದರು” ಎಂದು ಹೇಳಿದ್ದಾನೆ ವಿಜಯ್ ರಂಗರಾಜು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top