fbpx
ಸಮಾಚಾರ

ವಿಷ್ಣುವರ್ಧನ್ ವಿರುದ್ಧ ಕೀಳುಮಟ್ಟದ ಹೇಳಿಕೆ: ನಟನ ವಿರುದ್ಧ ಪುನೀತ್ ರಾಜಕುಮಾರ್ ಆಕ್ರೋಶ

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತೆಲುಗು ಹಿರಿಯ ನಟ ವಿಜಯ ರಂಗರಾಜು ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ವಿಷ್ಣುದಾದಾ ಅಗೌರವವಾಗಿ ಮಾತನಾಡಿರುವ ನಟನ ವಿರುದ್ಧ ಈಗಾಗಲೇ ನಟರಾದ ಜಗ್ಗೇಶ್, ಪ್ರಥಮ್, ಅನಿರುದ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಪುನೀತ್ ರಾಜಕುಮಾರ್ ಅವರು ವಿಜಯ್ ರಂಗರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

ಪುನೀತ್ ಆಕ್ರೋಶ:
ಟ್ವೀಟರ್​ನಲ್ಲಿ ತೆಲುಗು ನಟನ ವಿರುದ್ಧ ಹರಿಹಾಯ್ದಿರುವ ನಟ ಪುನೀತ್ ರಾಜಕುಮಾರ್ ” ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು”” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಜರಾಜು ಹೇಳಿದ್ದೇನು?
ನಟ ವಿಜಯ್ ರಂಗರಾಜು ಮಾಧ್ಯಮವೊಂದಕ್ಕೆ ನೀಡಿರುವ ಸಂರ್ದಶನದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. “ಮುತ್ತೈದೆ ಭಾಗ್ಯ ಚಿತ್ರದ ಶೂಟಿಂಗ್ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಅಲ್ಲಿ ನಾನು ಹೋದಾಗ ನನ್ನನ್ನು ಹೊರಗೆ ಕಳಿಸೋಕೆ ವಿಷ್ಣುವರ್ಧನ ಹೇಳಿದ್ರು. ಯಾಕೆ ಕಳಿಸ್ಬೇಕು ಅಂದಾಗ ಡಿಸ್ಟರ್ಬ್ ಆಗುತ್ತೆ ಅಂದಿದ್ದರು ವಿಷ್ಣು ವರ್ಧನ್ ಗೆ ಸ್ವಲ್ಪ ಲೇಡೀಸ್ ವೀಕ್‌ನೆಸ್ ಇತ್ತು” ಎಂದಿದ್ದಾನೆ ವಿಜಯ ರಂಗರಾಜು.

“ಕನ್ನಡ ಖೈದಿ ಸಿನಿಮಾ ಶೂಟ್ ಸಂದರ್ಭ ಫೈಟ್ ಸೀನ್ ಶೂಟ್ ಆಗ್ತಿತ್ತು. ಅಲ್ಲಿ ವಿಷ್ಣುವರ್ಧನ್ ನನ್ನ ಭುಜಕ್ಕೆ ಹೊಡೆಯಬೇಕಿತ್ತು, ಆದರೆ ವಿಷ್ಣುವರ್ಧನ್ ನನ್ನ ತಲೆಗೆ ಹೊಡೆದಿದ್ದರು. ಆ ಸಂದರ್ಭ ಕೋಪಗೊಂಡ ನಾನು ವಿಷ್ಣುವರ್ಧನ್ ಅವರ ಕಾಲರ್ ಪಟ್ಟಿ ಹಿಡಿದು ಹೊಡೆಯಲು ಹೋಗಿದ್ದೆ. ಆ ವೇಳೆ ಸೆಟ್ ನಲ್ಲಿ ಇದ್ದವರು ನನ್ನನ್ನು ಬಿಡಿಸಿದ್ದರು” ಎಂದು ಹೇಳಿದ್ದಾನೆ ವಿಜಯ್ ರಂಗರಾಜು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top